Select Your Language

Notifications

webdunia
webdunia
webdunia
webdunia

ಮೈಕ್ರೋವೇವ್ ನಲ್ಲಿ ಮಾಡಿದ ಅಡುಗೆ ಆರೋಗ್ಯಕ್ಕೆ ಹಾನಿಕರವೇ?

ಮೈಕ್ರೋವೇವ್ ನಲ್ಲಿ ಮಾಡಿದ ಅಡುಗೆ ಆರೋಗ್ಯಕ್ಕೆ ಹಾನಿಕರವೇ?
ಬೆಂಗಳೂರು , ಶುಕ್ರವಾರ, 20 ಏಪ್ರಿಲ್ 2018 (16:05 IST)
ಬೆಂಗಳೂರು : ಪ್ರತಿ ದಿನ ಕೆಲಸದ ಒತ್ತಡದಿಂದಾಗಿ ನಾವು ನಮ್ಮ ಆರೋಗ್ಯದ ಕಡೆ ಗಮನ ಹರಿಸುವುದೇ ಕಡಿಮೆ ಆಗಿದೆ. ಮನೆಗೆ ಸುಸ್ತಾಗಿ ಬಂದು ಇರುವ ಆಹಾರವನ್ನೇ ಬಿಸಿ ಮಾಡಿಯೋ ಇಲ್ಲ ಹೊರಗಿನಿಂದ ತರಿಸಿಯೋ ತಿಂದು ಮಲಗುತ್ತೇವೆ. ಇನ್ನು ಕೆಲವರು ದಿಡೀರ್ ಆಹಾರ ರೆಡಿ ಆಗಬೇಕೆಂದು ಮೈಕ್ರೋವೇವ್ ಅನ್ನು ಬಳಸುತ್ತಾರೆ. ಆದರೆ ನಾವು ಮೈಕ್ರೋವೇವ್ ಬಳಸುವುದು ಎಷ್ಟು ಸೂಕ್ತ ಎಂಬುದು ಹಲವರಿಗೆ ತಿಳಿದಿಲ್ಲ. ಆದರೆ ಇದರಿಂದಾಗುವ ಆರೋಗ್ಯದ ಹಾನಿಯ ಬಗ್ಗೆ ತಿಳಿದರೆ ಇನ್ನು ಮುಂದೆ ಬಳಸುವ ಮುನ್ನ ಸ್ವಲ್ಪಮಟ್ಟಿಗೆ ಯೋಚಿಸುತ್ತೀರಿ. 


ಮೈಕ್ರೋವೇವ್ ನಲ್ಲಿ ಮಾಡಿದ ಅಡುಗೆ ಆರೋಗ್ಯಕ್ಕೆ ಹಾನಿಕರ ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ. ಇನ್ನು ಕೆಲವರಿಗೆ ಗೊತ್ತು ಆದರೆ ಅನಿವಾರ್ಯಕ್ಕೆ ಕಟ್ಟುಬಿದ್ದಿದ್ದರೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ಬೌಲ್ ಗಳಲ್ಲಿ ಆಹಾರವನ್ನಿಟ್ಟು ನಾವು ಮೈಕ್ರೋವೇವ್ ನಲ್ಲಿ ಬಿಸಿ ಮಾಡ್ತೇವೆ. ಆಗ ಆ ಪ್ಲಾಸ್ಟಿಕ್ ನಿಂದ ಕೆಲ ಕ್ಯಾನ್ಸರ್ ಕಾರಕ ಜೀವಾಣುಗಳು ಆಹಾರ ಸೇರಿಕೊಳ್ಳುತ್ತವೆ.


ನಾವು ಆ ಆಹಾರವನ್ನು ಸೇವಿಸಿದಾಗ ಕ್ಯಾನ್ಸರ್ ಕಾರಕ ಜೀವಾಣು ನಮ್ಮ ದೇಹವನ್ನು ಸೇರುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೂ ಅದು ಒತ್ತಡ ಹೇರಿ ಜೀರ್ಣಗ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ಇದರಿಂದ ಫಲವತ್ತತೆ, ಹಾರ್ಮೋನ್ ಸಮತೋಲನ, ರಕ್ತದೊತ್ತಡ, ಹೃದಯದ ಆರೋಗ್ಯ, ನಮ್ಮ ಮನಃಸ್ಥಿತಿ ಎಲ್ಲದರ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಮೈಕ್ರೋವೇವ್ ಬಳಕೆಯನ್ನು ಇನ್ನಾದರೂ ಆದಷ್ಟು ಕಡಿಮೆ ಮಾಡಿ, ಆರೋಗ್ಯಕರವಾಗಿರಲು ಪ್ರಯತ್ನಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ನಿಂದ ಈ ಪಜೀತಿಗಳು ಎದುರಾಗಬಹುದು!