Select Your Language

Notifications

webdunia
webdunia
webdunia
webdunia

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಷ್ಟು ನೀರು ಕುಡಿಯಲೇಬೇಕು!

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಷ್ಟು ನೀರು ಕುಡಿಯಲೇಬೇಕು!

Sampriya

ಬೆಂಗಳೂರು , ಬುಧವಾರ, 3 ಏಪ್ರಿಲ್ 2024 (14:43 IST)
Photo Courtesy
ಬೆಂಗಳೂರು: ರಾಜ್ಯದಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಮನೆಯಿಂದ ಹೊರಗಡೆ ಬರಲು ಹೆದರುವಂತಾಗಿದೆ.

ಇನ್ನೂ ಈ ಬಿಸಿಲು ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ದೇಹವನ್ನು ಸಮತೋಲದಲ್ಲಿ ಇಟ್ಟುಕೊಳ್ಳಲು ನಮ್ಮ ದಿನನಿತ್ಯದ ಆಹಾರ ಸೇವನೆ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ತುಂಬಾನೇ ಅಗತ್ಯ. ಇಲ್ಲದಿದ್ದರೆ ಉರಿಮೂತ್ರ, ಚರ್ಮದ ಸಮಸ್ಯೆ, ತಲೆನೋವು ಸೇರಿದಂತೆ ಅನೇಕ ರೋಗಗಳು ಕಾಡಬಹುದು. ಆದ್ದರಿಂದ ಈ ಸಂದರ್ಭದಲ್ಲಿ ದೇಹಕ್ಕೆ ಇತ್ತಿಷ್ಟು ನೀರಿನ ಅವಶ್ಯಕತೆಯಿರುತ್ತದೆ.

ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಯುಎಸ್‌ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸ್‌ಸ್ ಪ್ರಕಾರ ಪುರುಷರು 3.7 ಮತ್ತು ಮಹಿಳೆಯರು ದಿನ 2.7 ಲೀಟರ್ ನೀರು ಸೇವಿಸಬೇಕು ಎಂದು ಹೇಳಿದೆ. ಇನ್ನೂ ವೈದ್ಯರ ಬಳಿ ಹೋದಾಗಲು ದಿನಕ್ಕೆ 8 ಗ್ಲಾಸ್‌ನಷ್ಟು ನೀರು ಸೇವನೆ ಮಾಡಲೇಬೆಕೆಂದು ಹೇಳುತ್ತಾರೆ.

ಇನ್ನೂ ಬೇಸಿಗೆ ಕಾಲದಲ್ಲಿ ನೀರಿನ ಅಂಶವಿರುವ ತರಕಾರಿ, ಹಣ್ಣುಗಳ ಸೇವನೆ ತುಂಬಾನೇ ಮುಖ್ಯವಾಗುತ್ತದೆ.  ನೀರಿನ ಕೊರತೆಯು ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ನಿಮ್ಮ ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದಾಗ ಡಿಹೈಡ್ರೇಷನ್‌ ಸಮಸ್ಯೆ ಸಂಭವಿಸುತ್ತದೆ. ಇದರಿಂದ ಆಯಾಸ ಸಮಸ್ಯೆ ಉಂಟಾಗುತ್ತದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೇಕಪ್ ಅಲರ್ಜಿಯಾದಾಗ ಈ ಸಿಂಪಲ್ ಮನೆ ಮದ್ದು ಮಾಡಿ