Select Your Language

Notifications

webdunia
webdunia
webdunia
webdunia

ಹೃದ್ರೋಗಿಗಳು ಡೈರಿ ಉತ್ಪನ್ನ ಸೇವಿಸಬಹುದೇ

Milk

Krishnaveni K

ಬೆಂಗಳೂರು , ಶನಿವಾರ, 30 ಮಾರ್ಚ್ 2024 (09:20 IST)
ಬೆಂಗಳೂರು: ಹೃದ್ರೋಗ ಮತ್ತು ಜೀವನಶೈಲಿಗೆ ಪರಸ್ಪರ ಸಂಬಂಧವಿದೆ. ಹೀಗಾಗಿ ಹೃದ್ರೋಗಿಗಳು ತಮ್ಮ ಆಹಾರ ವಿಚಾರದಲ್ಲಿ ಕೆಲವೊಂದು ಕಟ್ಟುನಿಟ್ಟು ಮಾಡಬೇಕಾಗುತ್ತದೆ.

ಇಂದಿನ ಒತ್ತಡದ ಜೀವನದಲ್ಲಿ ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಹೃದ್ರೋಗ ಬರುತ್ತದೆ. ಆಹಾರದಲ್ಲಿ ಬೇಡದ ಕೊಬ್ಬಿನಂಶ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟ ಏರಿಕೆಯಾಗಿ ಅದು ಕೊನೆಗೆ ಹೃದಯಕ್ಕೆ ಸಂಬಂಧಪಟ್ಟ ಅನಾರೋಗ್ಯಕ್ಕೆ ಕಾರಣವಾಗಬಹುದು.

ಹೀಗಾಗಿ ಹೃದಯವನ್ನು ಆರೋಗ್ಯವಾಗಿಡಬೇಕಾದರೆ ಆಹಾರ ಕ್ರಮವು ಸರಿಯಾಗಿರಬೇಕಾಗುತ್ತದೆ. ಹೆಚ್ಚಿನವರಿಗೆ ಕೊಬ್ಬಿನಂಶವಿರುವ ಡೈರಿ ಉತ್ಪನ್ನಗಳನ್ನು ಸೇವಿಸಬಹುದೇ ಎಂಬ ಅನುಮಾನಗಳಿರುತ್ತವೆ.  ಹೃದ್ರೋಗಿಳು ಹಾಲು, ಮೊಸರು ಸೇವನೆ ಮಾಡುವುದು ಎಷ್ಟು ಒಳ್ಳೆಯದು?

ಈಗಾಗಲೇ ಕೊಲೆಸ್ಟ್ರಾಲ್ ಅಂಶ ಅಧಿಕವಾಗಿದ್ದರೆ ಡೈರಿ ಉತ್ಪನ್ನಗಳನ್ನು ಕಡಿಮೆ ಸೇವಿಸುವುದು ಉತ್ತಮ. ಕೊಲೆಸ್ಟ್ರಾಲ್ ಅಂಶ ಹೆಚ್ಚಿದ್ದಾಗ ಅತಿಯಾಗಿ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಹೃದಯಾಘಾತದಂತಹ ಅಪಾಯಗಳಿರುತ್ತವೆ. ಹೀಗಾಗಿ ಕೊಲೆಸ್ಟ್ರಾಲ್ ಅಂಶ ಹೆಚ್ಚಿರುವವರು ಡೈರಿ ಉತ್ಪನ್ನಗಳನ್ನು ತಪ್ಪಿಸಿದರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿ ತಿನಿಸು ತಿಂದಾಗ ಬಾಯಾರಿಕೆಯಾಗುವುದು ಯಾಕೆ ಗೊತ್ತಾ