Select Your Language

Notifications

webdunia
webdunia
webdunia
webdunia

ಭಾರತ-ವಿಂಡೀಸ್ ಟಿ20: ಟೀಂ ಇಂಡಿಯಾಗೆ ಜಯ ತಂದಿತ್ತ ಆರಂಭಿಕರು

ಭಾರತ-ವಿಂಡೀಸ್ ಟಿ20: ಟೀಂ ಇಂಡಿಯಾಗೆ ಜಯ ತಂದಿತ್ತ ಆರಂಭಿಕರು
ಫ್ಲೋರಿಡಾ , ಭಾನುವಾರ, 13 ಆಗಸ್ಟ್ 2023 (08:40 IST)
Photo Courtesy: Twitter
ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು. ಶೈ ಹೋಪ್ 45, ಶಿಮ್ರಾನ್ ಹೆಟ್ಮೈರ್ 61 ರನ್ ಗಳಿಸಿದರು. ಭಾರತದ ಪರ ಅರ್ಷ್ ದೀಪ್ ಸಿಂಗ್ 3,ಕುಲದೀಪ್ ಯಾದವ್ 2, ಮುಕೇಶ್ ಕುಮಾರ್, ಚಾಹಲ್, ಅಕ್ಸರ್ ಪಟೇಲ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕರು ಸ್ಪೋಟಕ ಆರಂಭ ನೀಡಿದರು. 15.3 ಓವರ್ ಗಳವರೆಗೆ ಜೊತೆಯಾಟವಾಡಿದ ಶುಬ್ನಂ ಗಿಲ್, ಯಶಸ್ವಿ ಜೈಸ್ವಾಲ್ 165 ರನ್ ಒಟ್ಟುಗೂಡಿಸಿದರು. ಈ ಸಂದರ್ಭದಲ್ಲಿ 47 ಎಸೆತಗಳಿಂದ 77 ರನ್ ಗಳಿಸಿದ್ದ ಗಿಲ್ ಔಟಾದರು. ಈ ವಿಕೆಟ್ ಶೆಫರ್ಡ್ ಪಾಲಾಯಿತು. ಆದರೆ ಇನ್ನೊಂದೆಡೆ ಕೊನೆಯವರೆಗೂ ಅಜೇಯರಾಗುಳಿದ ಯಶಸ್ವಿ ಜೈಸ್ವಾಲ್ 51 ಎಸೆತಗಳಿಂದ ಅಜೇಯ 84 ರನ್ ಸಿಡಿಸಿದರು. ಇದರಲ್ಲಿ 3 ಸಿಕ್ಸರ್ 11 ಬೌಂಡರಿ ಸೇರಿತ್ತು. ರಿವರ್ಸ್ ಸ್ವೀಪ್ ಮೂಲಕ ಹೊಡೆದ ಸಿಕ್ಸರ್ ಅಂತೂ ಅನುಭವಿ ಮನಮೋಹಕವಾಗಿತ್ತು. ಅಂತಿಮವಾಗಿ ಟೀಂ ಇಂಡಿಯಾ 17 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಗೆಲುವು ಕಂಡಿತು. ಜೊತೆಗೆ ಸರಣಿಯಲ್ಲಿ 2-2 ಅಂತರದಿಂದ ಸಮಬಲ ಸಾಧಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂ ಆದಾಯ ಬಗ್ಗೆ ಸ್ಪಷ್ಟನೆ ಕೊಟ್ಟ ವಿರಾಟ್ ಕೊಹ್ಲಿ