Select Your Language

Notifications

webdunia
webdunia
webdunia
webdunia

ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ಇತಿಹಾಸ ಸೃಷ್ಟಿಸಲಿರುವ ಟೀಂ ಇಂಡಿಯಾ

ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ಇತಿಹಾಸ ಸೃಷ್ಟಿಸಲಿರುವ ಟೀಂ ಇಂಡಿಯಾ
ಮುಂಬೈ , ಶನಿವಾರ, 20 ಅಕ್ಟೋಬರ್ 2018 (09:33 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಐದು ಏಕದಿನ ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದ್ದು, ಈ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ದಾಖಲೆಯೊಂದನ್ನು ಮಾಡಲಿದೆ.

ಭಾರತ-ವಿಂಡೀಸ್ ನಡುವೆ ಇದು 19 ನೇ ಸರಣಿಯಾಗಲಿದ್ದು, ಭಾರತ ಇದುವರೆಗೆ 948 ಏಕದಿನ ಪಂದ್ಯಗಳನ್ನಾಡಿದೆ. ಅಂದರೆ ವಿಶ್ವದಲ್ಲೇ ಅತ್ಯಧಿಕ ಏಕದಿನ ಪಂದ್ಯಗಳಾಡಿದ ದಾಖಲೆ ಭಾರತದ ಹೆಸರಿನಲ್ಲಿದೆ.

ಈ ಸರಣಿಯಲ್ಲಿ ಭಾರತ 950 ನೇ ಪಂದ್ಯವಾಡಲಿದ್ದು, ಈ ಮೂಲಕ ಇಂತಹ ದಾಖಲೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 916 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅದೇನೇ ಇದ್ದರೂ 950 ಪಂದ್ಯವಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆ ಶಾಶ್ವತವಾಗಿ ಟೀಂ ಇಂಡಿಯಾ ಹೆಸರಿಗೆ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿಂಡೀಸ್ ಸರಣಿಗೆ ಎರಡು ದಿನ ಮೊದಲೇ ಗುವಾಹಟಿಗೆ ಬಂದಿಳಿದ ಟೀಂ ಇಂಡಿಯಾ