Select Your Language

Notifications

webdunia
webdunia
webdunia
webdunia

ಡರ್ಬನ್ ಗೆದ್ದ ಟೀಂ ಇಂಡಿಯಾ ಸೃಷ್ಟಿಸಿದ ದಾಖಲೆಗಳಿವು!

ಡರ್ಬನ್ ಗೆದ್ದ ಟೀಂ ಇಂಡಿಯಾ ಸೃಷ್ಟಿಸಿದ ದಾಖಲೆಗಳಿವು!
ಡರ್ಬನ್ , ಶುಕ್ರವಾರ, 2 ಫೆಬ್ರವರಿ 2018 (09:10 IST)
ಡರ್ಬನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಭಾರತ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಯಾವೆಲ್ಲಾ ದಾಖಲೆಗಳು ಸೃಷ್ಟಿಯಾದವು ನೋಡೋಣ.
 

67 ರನ್ ಗೆ 2 ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ಟೀಂ ಇಂಡಿಯಾಗೆ ಕೊಹ್ಲಿ ಮತ್ತು ರೆಹಾನೆ ಜತೆಯಾಟ ಟಾನಿಕ್ ಆಯಿತು. ಅತಿಥೇಯ ತಂಡದ ಕೈಯಿಂದ ಇವರಿಬ್ಬರು ತಮ್ಮೆಲ್ಲಾ ಅನುಭವವ ಧಾರೆಯೆರೆದು ಪಂದ್ಯ ಕಸಿದುಕೊಂಡರು. ಇದಕ್ಕಾಗಿ ದಾಖಲೆ 189 ರನ್ ಜತೆಯಾಟವಾಡಿದರು. ಇದು ಭಾರತದ ಪರ ಆಫ್ರಿಕಾ ವಿರುದ್ಧ ಮೂರನೇ ವಿಕೆಟ್ ಗೆ ಅತ್ಯಂತ ಗರಿಷ್ಠ ರನ್ ಜತೆಯಾಟವೆನಿಸಿತು.

ಇದಕ್ಕೂ ಮೊದಲು ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡುಲ್ಕರ್ ಬೆಲ್ ಫಾಸ್ಟ್ ನಲ್ಲಿ 2007 ರಲ್ಲಿ 158 ರನ್ ಜತೆಯಾಟವಾಡಿದ್ದೇ ಗರಿಷ್ಠವಾಗಿತ್ತು. ರೆಹಾನೆ ಏಕದಿನ ಪಂದ್ಯಗಳಲ್ಲಿ ಸತತ 7 ನೇ ಅರ್ಧಶತಕ ಗಳಿಸಿದರೆ, ಕೊಹ್ಲಿಗೆ ಇದು 33 ನೇ ಏಕದಿನ ಶತಕವಾಗಿತ್ತು. ಅಷ್ಟೇ ಅಲ್ಲದೆ, ನಾಯಕನಾಗಿ ಅತೀ ಹೆಚ್ಚು ಶತಕ ದಾಖಲಿಸಿದವರ ಪಟ್ಟಿಯಲ್ಲಿ ಸೌರವ್ ಗಂಗೂಲಿಯೊಂದಿಗೆ (11 ಶತಕ) ಮೂರನೇ ಸ್ಥಾನ ಕೊಹ್ಲಿ ಪಾಲಾಗಿದೆ.

ಈ ಪಂದ್ಯದಲ್ಲಿ ಎರಡೂ ತಂಡದ ನಾಯಕರು ಶತಕ ಗಳಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಒಂದೇ ಪಂದ್ಯದಲ್ಲಿ ಇಬ್ಬರು ನಾಯಕರು ಶತಕ ಗಳಿಸಿದವರ ಪೈಕಿ ಕೊಹ್ಲಿ ನಾಲ್ಕನೇ ಬಾರಿ ಗೌರವ ಹಂಚಿಕೊಂಡರು. ಇವಿಷ್ಟು ಈ ಪಂದ್ಯದ ದಾಖಲೆಗಳು. ಮುಂದಿನ ಪಂದ್ಯಗಳಲ್ಲಿ ಎಷ್ಟು ದಾಖಲೆಗಳಾಗುತ್ತೋ ಕಾದು ನೋಡೋಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೇಸಿಂಗ್ ಸಿಕ್ಕೊಡನೆ ವಿರಾಟ್ ಕೊಹ್ಲಿಗೆ ಬ್ರೇಕ್ ಹಾಕೋರೇ ಇಲ್ಲ!