Select Your Language

Notifications

webdunia
webdunia
webdunia
webdunia

ಟೀಕೆ ಮಾಡೋರಿಗೆಲ್ಲಾ ಡೋಂಟ್ ಕೇರ್ ಎಂದ ಶಿಖರ್ ಧವನ್

ಟೀಕೆ ಮಾಡೋರಿಗೆಲ್ಲಾ ಡೋಂಟ್ ಕೇರ್ ಎಂದ ಶಿಖರ್ ಧವನ್
ನವದೆಹಲಿ , ಮಂಗಳವಾರ, 13 ನವೆಂಬರ್ 2018 (09:18 IST)
ನವದೆಹಲಿ: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಾವು ಫಾರ್ಮ್ ಕಳೆದುಕೊಂಡು ಹೆಣಗಾಡುತ್ತಿದ್ದಾಗ ಟೀಕೆ ಮಾಡಿದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ಏಷ್ಯಾ ಕಪ್ ಕ್ರಿಕೆಟ್ ನಿಂದ ಹಿಡಿದು ಮೊನ್ನೆಯ ವಿಂಡೀಸ್ ಏಕದಿನ ಸರಣಿಯವರೆಗೆ ಫಾರ್ಮ್ ನಲ್ಲಿಲ್ಲದೇ ಹೋಗಿದ್ದಕ್ಕೆ ವ್ಯಾಪಕ ಟೀಕೆಗೊಳಗಾಗಿದ್ದ ಶಿಖರ್ ಧವನ್ ಟೀಕೆ ಮಾಡೋರ ಕಾಮೆಂಟ್ ಗೆಲ್ಲಾ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

ವಿಂಡೀಸ್ ವಿರುದ್ಧ ಫೈನಲ್ ಟಿ20 ಪಂದ್ಯದಲ್ಲಿ 92 ರನ್ ಗಳಿಸಿ ಗೆಲುವಿನ ರೂವಾರಿಯಾದ ಧವನ್ ಪಂದ್ಯದ ಬಳಿಕ ಈ ಮಾತು ಹೇಳಿದ್ದಾರೆ. ‘ಜನ ಏನು ಹೇಳ್ತಾರೆ ಎನ್ನುವುದು ನನಗೆ ಮುಖ್ಯವಲ್ಲ. ನನ್ನನ್ನು ನಾನು ಬೆಂಬಲಿಸುತ್ತೇನೆ ಮತ್ತು ನನ್ನ ಆಟದ ಮೇಲೆ ನಂಬಿಕೆ ಇಡುತ್ತೇನೆ’’ ಎಂದು ಧವನ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ರಿಕೆಟ್: ಮೊದಲ ಪಂದ್ಯದ ಮೊದಲ ದಿನ ಕ್ಲಿಕ್ ಆದ ಕರ್ನಾಟಕ ಬೌಲರ್ ಗಳು