Select Your Language

Notifications

webdunia
webdunia
webdunia
webdunia

ಕಾಶ್ಮೀರ ವಿಚಾರದಲ್ಲಿ ಮತ್ತೆ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕಿರಿಕ್

ಕಾಶ್ಮೀರ ವಿಚಾರದಲ್ಲಿ ಮತ್ತೆ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕಿರಿಕ್
ಕರಾಚಿ , ಬುಧವಾರ, 4 ಏಪ್ರಿಲ್ 2018 (09:35 IST)
ಕರಾಚಿ: ಇತ್ತೀಚೆಗಷ್ಟೇ ಭಾರತೀಯ ಧ್ವಜದ ಜತೆಗೆ ಅಭಿಮಾನಿಯೊಬ್ಬರ ಜತೆಗೆ ಫೋಟೋ ತೆಗೆಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇದೀಗ ಕಾಶ್ಮೀರ ವಿಚಾರದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿ ತಿರುಗೇಟು ಪಡೆದುಕೊಂಡಿದ್ದಾರೆ.

‘ಭಾರತ ಸ್ವಾಧೀನದಲ್ಲಿರುವ ಕಾಶ್ಮೀರದಲ್ಲಿ ಅಮಾಯಕರ ರಕ್ತಪಾತ ನಿಲ್ಲಬೇಕು. ವಿಶ್ವಸಂಸ್ಥೆ ಅಂಗ ಸಂಸ್ಥೆಗಳು ಈಗ ಯಾಕೆ ಮೌನವಾಗಿದೆ? ಈ ವಿಚಾರದ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ?’ ಎಂದು ಶಾಹಿದ್ ಅಫ್ರಿದಿ ವಿವಾದಾತ್ಮಕ ಟ್ವೀಟ್ ಮಾಡಿದ್ದರು.

ಇದಕ್ಕೆ ಕ್ರಿಕೆಟಿಗ ಗೌತಮ್ ಗಂಭೀರ್ ಸೇರಿದಂತೆ ಭಾರತೀಯ ಅಭಿಮಾನಿಗಳು ತಕ್ಕ ತಿರುಗೇಟು ನೀಡಿದ್ದಾರೆ. ‘ಮಾಧ್ಯಮಗಳು ಅಫ್ರಿದಿ ಹೇಳಿಕೆಗೆ ನನ್ನ ಪ್ರತಿಕ್ರಿಯೆ ಕೇಳಿ ಫೋನ್ ಮಾಡಿದ್ದವು. ಏನೆಂದು ಹೇಳಲಿ? ಅಫ್ರಿದಿ ಹೇಳಿದ ಯುಎನ್ ಶಬ್ಧದ ಇನ್ನೊಂದು ಅರ್ಥ ಅಂಡರ್ ನೈಂಟೀನ್. ಅಂಡರ್ ನೈಂಟೀನ್ ಅವರ ವಯಸ್ಸು ಎಂದು ಸೂಚಿಸುತ್ತದೆ. ಮಾಧ್ಯಮಗಳು ನಿರಾಳವಾಗಿರಬಹುದು. ಶಾಹಿದ್ ಅಫ್ರಿದಿ ನೋ ಬಾಲ್ ತಾವು ಔಟಾಗಿರುವುದನ್ನು ಸಂಭ್ರಮಿಸುತ್ತಿದ್ದಾರೆ’ ಎಂದು ಗಂಭೀರ್ ತಕ್ಕ ತಿರುಗೇಟು ನೀಡಿದ್ದಾರೆ.  ಇದೇ ರೀತಿ ಟ್ವಿಟರ್ ನಲ್ಲಿ ಹಲವರು ಶಾಹಿದ್ ಅಫ್ರಿದಿಗೆ ಏಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ವಿರಾಟ್ ಕೊಹ್ಲಿ ಜತೆ ಹೋಲಿಸಬೇಡಿ ಎಂದ ಪಾಕ್ ಕ್ರಿಕೆಟಿಗ