Select Your Language

Notifications

webdunia
webdunia
webdunia
webdunia

ಅಂಬಾನಿ ಮುಂದೆಯೇ ರೋಹಿತ್ ಶರ್ಮಾಗೆ ಪ್ರಶಸ್ತಿಯನ್ನು ಅರ್ಪಿಸಿದ ಆಕಾಶ್ ಮಧ್ವಾಲ್

Akash Madhwal

Krishnaveni K

ಮುಂಬೈ , ಬುಧವಾರ, 3 ಏಪ್ರಿಲ್ 2024 (08:53 IST)
Photo Courtesy: Twitter
ಮುಂಬೈ: ಐಪಿಎಲ್ 2024 ರಲ್ಲಿ ಕಳೆದ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ್ದಕ್ಕಾಗಿ ತಂಡದೊಳಗೇ ನೀಡಲಾಗಿದ್ದ ಪ್ರಶಸ್ತಿಯನ್ನು ವೇಗಿ ಆಕಾಶ್ ಮಧ್ವಾಲ್ ಮಾಜಿ ನಾಯಕ ರೋಹಿತ್ ಶರ್ಮಾಗೆ ಅರ್ಪಿಸಿದ್ದಾರೆ.
 

ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಕಳೆದ ಪಂದ್ಯದಲ್ಲಿ ಸೋತ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಮೀಟಿಂಗ್ ವೇಳೆ ಆಕಾಶ್ ಶ್ರೇಷ್ಠ ಪ್ರದರ್ಶನಕ್ಕೆ ಪ್ರಶಸ್ತಿ ನೀಡಲಾಯಿತು. ಪ್ರತೀ ಪಂದ್ಯದಲ್ಲಿ ಮುಂಬೈ ತಂಡದಲ್ಲಿ ಈ ರೀತಿ ಉತ್ತಮ ಪ್ರದರ್ಶನ ನೀಡಿದವರಿಗೆ ಪ್ರಶಸ್ತಿ ನೀಡುವ ಪರಿಪಾಠವಿದೆ.

ಈ ಪಂದ್ಯದಲ್ಲಿ ಆಕಾಶ್ 3 ವಿಕೆಟ್ ಕಬಳಿಸಿದ್ದರು. ತಂಡದ ಮೀಟಿಂಗ್ ವೇಳೆ ಮಾಲಕಿ ನೀತಾ ಅಂಬಾನಿ ಮತ್ತು ಪುತ್ರ ಆಕಾಶ್ ಅಂಬಾನಿ ಮಾತನಾಡಿದ್ದರು. ಈ ವೇಳೆ ತಂಡದ ಪ್ರದರ್ಶನದ ಬಗ್ಗೆ ವಿಮರ್ಶಿಸಿ, ಆಟಗಾರರನ್ನು ಹುರಿದುಂಬಿಸಿದರು. ಈ ವೇಳೆ ಆಕಾಶ್ ಗೆ ಉತ್ತಮ ಪ್ರದರ್ಶನಕ್ಕೆ ಪ್ರಶಸ್ತಿ ನೀಡಲಾಯಿತು.

ಈ ವೇಳೆ ಧನ್ಯವಾದ ಸಲ್ಲಿಸಿದ ಆಕಾಶ್ ಅಂಬಾನಿಯವರ ಎದುರೇ ರೋಹಿತ್ ಶರ್ಮಾಗೆ ಪ್ರಶಸ್ತಿ ಅರ್ಪಿಸಿದರು. ಯುವ ವೇಗಿ ಆಕಾಶ್ ಮಧ‍್ವಾಲ್ ಕಳೆದ ವರ್ಷ ಐಪಿಎಲ್ ನಲ್ಲಿ ಚಿಗುರಿದ ಪ್ರತಿಭೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ತಂಡಕ್ಕೆ ಬಲ ನೀಡಿದ ಬೌಲರ್. ರೋಹಿತ್ ಶರ್ಮಾ ಈ ಯುವ ವೇಗಿಗೆ ಅವಕಾಶ ನೀಡಿದ್ದರು. ಹೀಗಾಗಿ ತಮಗೆ ಅವಕಾಶ ಕೊಟ್ಟ ಮೊದಲ ನಾಯಕನಿಗೆ ಪ್ರಶಸ್ತಿ ಅರ್ಪಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿ ಕೆಕೆಆರ್