Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿ ಕೆಕೆಆರ್

IPL 2024

Krishnaveni K

ವಿಶಾಖಪಟ್ಟಣಂ , ಬುಧವಾರ, 3 ಏಪ್ರಿಲ್ 2024 (08:26 IST)
ವಿಶಾಖಪಟ್ಟಣಂ: ಐಪಿಎಲ್ 2024 ರ ಇಂದಿನ ಪಂದ್ಯದಲ್ಲಿ ಸತತ ಎರಡು ಗೆಲುವುಗಳಿಂದ ಉಬ್ಬಿರುವ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕೊತ್ತಾ ನೈಟ್ ರೈಡರ್ಸ್ ಇದುವರೆಗೆ ಆಡಿದ ಎರಡೂ ಪಂದ್ಯಗಳನ್ನೂ ಗೆದ್ದುಕೊಂಡಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸ್ವತಃ ನಾಯಕ ಶ್ರೇಯಸ್ ಅಯ್ಯರ್ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಮತ್ತೆ ಅದೇ ಪ್ರದರ್ಶನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.

ಟಿ20 ಸ್ಪೆಷಲಿಸ್ಟ್ ಬ್ಯಾಟಿಗರ ಪಡೆಯನ್ನೇ ಹೊಂದಿರುವುದು ಕೆಕೆಆರ್ ಗೆ ಪ್ಲಸ್ ಪಾಯಿಂಟ್. ರಿಂಕು ಸಿಂಗ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ ಮತ್ತು ಸ್ವತಃ ನಾಯಕ ಶ್ರೇಯಸ್ ಅಯ್ಯರ್. ಬೌಲಿಂಗ್ ನಲ್ಲೂ ಹರ್ಷಿತ್ ರಾಣಾ, ಮಿಚೆಲ್ ಸ್ಟಾರ್ಕ್ ರಂತಹ ಅನನುಭವಿ ಮತ್ತು ಅನುಭವಿಗಳ ಬಲವಿದೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಗೆ ಈಗಷ್ಟೇ ಮೊದಲ ಗೆಲುವು ಸಿಕ್ಕಿದೆ. ಮೊದಲ ಎರಡು ಪಂದ್ಯಗಳಲ್ಲಿ ಸತತ ಸೋಲು ಕಂಡಿದ್ದ ಡೆಲ್ಲಿ ಕಳೆದ ಪಂದ್ಯದಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಸಿಎಸ್ ಕೆ ವಿರುದ್ಧದ ಗೆಲುವು ರಿಷಬ್ ಪಂತ್ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿರಬಹುದು. ಇದೀಗ ಕೆಕೆಆರ್ ಗೆಲುವಿನ ಕೇಕೆಗೆ ಬ್ರೇಕ್ ಹಾಕುತ್ತಾ ನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಯಾಂಕ್‌ ದಾಳಿಗೆ ತತ್ತರಿಸಿದ ಆರ್‌ಸಿಬಿ: ಸೂಪರ್‌ ಜೈಂಟ್ಸ್‌ಗೆ ಭರ್ಜರಿ ಜಯ