Select Your Language

Notifications

webdunia
webdunia
webdunia
webdunia

ಇಲ್ಲಿ ಕ್ಯೂಟೆಸ್ಟ್ ಯಾರು? ಕೆಎಲ್ ರಾಹುಲ್ ಜೊತೆಗಿರುವ ಈ ಮುದ್ದುಗೊಂಬೆ ಯಾರು

KL Rahul

Krishnaveni K

ಲಕ್ನೋ , ಬುಧವಾರ, 10 ಏಪ್ರಿಲ್ 2024 (09:16 IST)
Photo Courtesy: Twitter
ಲಕ್ನೋ: ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಕೆಎಲ್ ರಾಹುಲ್ ಮುದ್ದು ಮಗುವೊಂದನ್ನು ಎತ್ತಿಕೊಂಡಿರುವ ಫೋಟೋವೊಂದನ್ನು ಲಕ್ನೋ ಫ್ರಾಂಚೈಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

ಈ ಮಗುವಿನ ಜೊತೆಗೆ ರಾಹುಲ್ ರನ್ನು ನೋಡಿ ಅಭಿಮಾನಿಗಳು ಇವರಿಬ್ಬರಲ್ಲಿ ಯಾರು ಕ್ಯೂಟೆಸ್ಟ್ ಎಂದೇ ಗೊತ್ತಾಗುತ್ತಿಲ್ಲ. ಎರಡೂ ಮಗುವಿನ ಮನಸ್ಸಿನ ಮುಗ್ಧ ಮುಖಗಳು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಈ ಮುದ್ದು ಗೊಂಬೆಯಂತಹ ಮಗು ಯಾರದ್ದು ಗೊತ್ತಾ?

 ಈ ಮುದ್ದುಗೊಂಬೆ ಬೇರೆ ಯಾರೂ ಅಲ್ಲ, ಲಕ್ನೋ ತಂಡದ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಅವರ ಮಗಳು. ರಾಹುಲ್ ಗೆ ಮಕ್ಕಳೆಂದರೆ ಇಷ್ಟ. ಈ ಹಿಂದೆ ಕೃನಾಲ್ ಪಾಂಡ್ಯ ಮಗುವನ್ನು ಎತ್ತಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಇದೀಗ ಕ್ವಿಂಟನ್ ಮಗಳೊಂದಿಗಿನ ಫೋಟೋ ಎಲ್ಲರಿಗೂ ಇಷ್ಟವಾಗಿದೆ.

ಇತ್ತೀಚೆಗಷ್ಟೇ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಅದೆಲ್ಲವೂ ಸುಳ್ಳು ಸುದ್ದಿ ಎಂದು ಗೊತ್ತಾಗಿತ್ತು. ಇದೀಗ ರಾಹುಲ್ ಮಗುವಿನ ಜೊತೆಗಿನ ಬಾಂಧವ್ಯ ನೋಡಿ ತಮ್ಮ ಜೀವನದಲ್ಲೂ ಮಗು ಬರಮಾಡಿಕೊಳ್ಳುವುದು ಯಾವಾಗ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಎರಡೇ ರನ್ ಗಳಿಂದ ಹೈದರಾಬಾದ್ ವಿರುದ್ಧ ಸೋತ ಪಂಜಾಬ್ ಕಿಂಗ್ಸ್