Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಪಂಜಾಬ್ ಕಿಂಗ್ಸ್ ಸತತ ನಾಲ್ಕನೇ ಸೋಲು

Shubman Gill

Krishnaveni K

ಚಂಡೀಘಡ , ಸೋಮವಾರ, 22 ಏಪ್ರಿಲ್ 2024 (08:45 IST)
Photo Courtesy: Twitter
ಚಂಡೀಘಡ: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಸತತ ನಾಲ್ಕನೇ ಸೋಲು ಅನುಭವಿಸಿದೆ. ಗುಜರಾತ್ ಟೈಟನ್ಸ್ 3 ವಿಕೆಟ್ ಗಳ ಗೆಲುವು ಸಾಧಿಸಿದೆ.

ಇದೊಂದು ಲೋ ಸ್ಕೋರಿಂಗ್ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 142 ರನ್ ಗಳಿಗೆ ಆಲೌಟ್ ಆಯಿತು. ಸ್ಯಾಮ್ ಕ್ಯುರೆನ್ 19 ಎಸೆತಗಳಲ್ಲಿ 20 ರನ್ ಗಳಿಸಿದರೆ, ಪ್ರಭಿಸ್ಮರನ್ 21 ಎಸೆತಗಳಿಂದ 35 ರನ್ ಗಳಿಸಿ ಔಟಾದರು. ಕೆಳ ಕ್ರಮಾಂಕದಲ್ಲಿ ಹರ್ಪ್ರೀತ್ ಸಿಂಗ್ 12 ಎಸೆತಗಳಲ್ಲಿ 29 ರನ್ ಗಳಿಸಿದ ಕಾರಣ ತಂಡಕ್ಕೆ ಗೌರವಯುತ ಮೊತ್ತ ಗಳಿಸಲು ಸಾಧ‍್ಯವಾಯಿತು. ಗುಜರಾತ್ ಸಾಯಿ ಕಿಶೋರ್ 4 ವಿಕೆಟ್, ನೂರ್ ಅಹಮ್ಮದ್ ಮತ್ತು ಮೋಹಿತ್ ಶರ್ಮ ತಲಾ 2 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಕೂಡಾ ಬ್ಯಾಟಿಂಗ್ ನಲ್ಲಿ ತಿಣುಕಾಡಿತು. ಆದರೆ ಕೊನೆಯಲ್ಲಿ 19.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ಶುಬ್ಮನ್ ಗಿಲ್ 35, ಸಾಯಿ ಸುದರ್ಶನ್ 31 ಗಳಿಸಿದರು. ಕೆಳ ಕ್ರಮಾಂಕದಲ್ಲಿ 18 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದ ಕಾರಣ ತಂಡ ಗೆಲುವಿನ ಗುರಿ ಮುಟ್ಟಿತು. ಹರ್ಷಲ್ ಪಟೇಲ್ 3, ಲಿಯಾಮ್ ಲಿವಿಂಗ್ ಸ್ಟೋನ್ 2 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಆರ್ ಸಿಬಿ ಫ್ಯಾನ್ಸ್ ಗೆ ಮತ್ತೆ ಚೊಂಬು, ಕೆಕೆಆರ್ ವಿರುದ್ಧವೂ ಸೊಲಲು