Select Your Language

Notifications

webdunia
webdunia
webdunia
webdunia

ನಾನು ಕೊಟ್ಟ ಬ್ಯಾಟ್ ಮುರಿದೆಯಾ? ರಿಂಕು ಸಿಂಗ್ ಗೆ ಬೈದ ವಿರಾಟ್ ಕೊಹ್ಲಿ

Rinku Singh-Virat Kohli

Krishnaveni K

ಕೋಲ್ಕೊತ್ತಾ , ಭಾನುವಾರ, 21 ಏಪ್ರಿಲ್ 2024 (14:10 IST)
Photo Courtesy: Twitter
ಕೋಲ್ಕೊತ್ತಾ: ಕಳೆದ ಬಾರಿ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ಆರ್ ಸಿಬಿ ಸ್ಟಾರ್ ವಿರಾಟ್ ಕೊಹ್ಲಿ  ಯುವ ಕ್ರಿಕೆಟಿಗ ರಿಂಕು ಸಿಂಗ್ ಗೆ ತಮ್ಮ ಬ್ಯಾಟ್‍ ಒಂದನ್ನು ಉಡುಗೊರೆಯಾಗಿ ನೀಡಿದ್ದು ಭಾರೀ ಸುದ್ದಿಯಾಗಿತ್ತು.

ಆದರೆ ಈಗ ರಿಂಕು ಆ ಬ್ಯಾಟ್ ನ್ನು ಮುರಿದುಕೊಂಡಿದ್ದಾರೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿಯಿಂದ ಬೈಸಿಕೊಂಡಿದ್ದಾರೆ. ಇಂದು ಕೋಲ್ಕೊತ್ತಾದಲ್ಲಿ ಆರ್ ಸಿಬಿ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನ ಕೆಕೆಆರ್ ಬ್ಯಾಟಿಗ ರಿಂಕು ಸಿಂಗ್ ಮುರಿದ ಬ್ಯಾಟ್ ನ ಕತೆಯನ್ನು ಕೊಹ್ಲಿಗೆ ಹೇಳಿದ್ದಾರೆ. ಇದನ್ನು ಕೇಳಿ ಕೊಹ್ಲಿ ಸಿಟ್ಟಾಗಿದ್ದಾರೆ. ಈ ವಿಡಿಯೋವನ್ನು ಕೆಕೆಆರ್ ತಂಡ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ.

ರಿಂಕು ಸಿಂಗ್ ‘ನೀವು ಕೊಟ್ಟ ಬ್ಯಾಟ್ ಸ್ಪಿನ್ನರ್ ವಿರುದ್ಧ ಆಡುವಾಗ ಮುರಿದು ಹೋಯ್ತು’ ಎನ್ನುತ್ತಾರೆ. ಇದಕ್ಕೆ ಕೊಹ್ಲಿ ನಾನು ಕೊಟ್ಟ ಬ್ಯಾಟ್ ಸ್ಪಿನ್ನರ್ ವಿರುದ್ಧ ಆಡಿ ಮುರಿದೆಯಾ? ಎಲ್ಲಿ ಮುರಿಯಿತು ಎಂದು ಕೇಳುತ್ತಾರೆ. ಇದಕ್ಕೆ ರಿಂಕು ಮಧ‍್ಯದಲ್ಲೇ ತುಂಡಾಗಿದೆ ಎಂದು ತೋರಿಸುತ್ತಾರೆ.

ಬ್ಯಾಟ್ ನೋಡಿದ ಕೊಹ್ಲಿಗೆ ಸಿಟ್ಟೇ ಬರುತ್ತದೆ. ಅದಕ್ಕೆ ನಾನೇನು ಮಾಡಲಿ ಈಗ ಎಂದು ಕೇಳುತ್ತಾರೆ. ಇಲ್ಲ, ಜಸ್ಟ್ ನಿಮಗೆ ಮಾಹಿತಿ ನೀಡಿದೆ ಎಂದು ಭಯದಿಂದಲೇ ಹೇಳುತ್ತಾರೆ. ಅದಕ್ಕೆ ಕೊಹ್ಲಿ ನನಗೆ ನಿನ್ನ ಮಾಹಿತಿಯ ಅಗತ್ಯವಿಲ್ಲ ಎನ್ನುತ್ತಾರೆ. ಇದೇ ಸಂದರ್ಭದಲ್ಲಿ ವಿರಾಟ್ ಅವರ ಇನ್ನೊಂದು ಬ್ಯಾಟ್ ತೆಗೆದುಕೊಂಡು ರಿಂಕು ಬಾಲ್ ಹೊಡೆಯಲು ಹೋಗುತ್ತಾರೆ. ಆಗ ಕೊಹ್ಲಿ ಆ ಬ್ಯಾಟ್ ಚೆನ್ನಾಗಿಲ್ಲ ಎನ್ನುತ್ತಾರೆ. ಹಾಗಿದ್ದರೆ ನನಗೆ ಬೇರೆ ಬ್ಯಾಟ್ ಕೊಡುತ್ತೀರಾ ಎಂದು ರಿಂಕು ಕೇಳುತ್ತಾರೆ. ಕೊಹ್ಲಿಗೆ ಆಗ ಸಿಟ್ಟೇ ಬರುತ್ತದೆ. ನಾನು ಯಾರಿಗೆ ಕಳುಹಿಸಲಿ? ಎಂದು ಕೇಳುತ್ತಾರೆ. ಭಯಗೊಂಡ ರಿಂಕು ಇಲ್ಲ ಈ ಬ್ಯಾಟ್ ನಿಮ್ಮ ಬಳಿಯೇ ಇರಲಿ ಎಂದು ಮರಳಿಸುತ್ತಾರೆ.

ಇದಕ್ಕೆ ಕೊಹ್ಲಿ ಈ ಮೊದಲೇ ನಾನು ನಿನಗೆ ಒಂದು ಬ್ಯಾಟ್ ನೀಡಿದ್ದೆ. ಈಗ ನಿನಗೆ ಇನ್ನೊಂದು ಬ್ಯಾಟ್ ಕೊಡಲಾ? ಹೀಗೆ ಕೊಡುತ್ತಿದ್ದರೆ ಕೊನೆಗೆ ನನಗೇ ಕಷ್ಟವಾಗುತ್ತದೆ ಎಂದಿದ್ದಾರೆ. ರಿಂಕು ಪರಿ ಪರಿಯಾಗಿ ನಾನು ನಿಮಗೆ ತುಂಡಾದ ಬ್ಯಾಟ್ ಬೇಕಾದರೂ ತೋರಿಸುತ್ತೇನೆ ಎಂದು ಬೇಡಿಕೊಳ್ಳುತ್ತಾರೆ. ಇತ್ತ ಕೋಪದಲ್ಲಿದ್ದ ಕೊಹ್ಲಿ ಕ್ಯಾಮರಾ ಕಡೆಗೆ ತಿರುಗಿ ಒಂದು ಕಳ್ಳ ನಗೆ ಬೀರುತ್ತಾರೆ. ಈ ಆಸಕ್ತಿಕರ ವಿಡಿಯೋವನ್ನು ಕೆಕೆಆರ್ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಯಾರು ಏನೇ ಹೇಳಿದರೂ ಧೋನಿಗೆ ಇದಕ್ಕಿಂತ ಹೆಚ್ಚು ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ!