Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ದ್ವಿತೀಯ ಟಿ20 ಇಂದು

ಭಾರತ-ದ.ಆಫ್ರಿಕಾ ದ್ವಿತೀಯ ಟಿ20 ಇಂದು
ಗುವಾಹಟಿ , ಭಾನುವಾರ, 2 ಅಕ್ಟೋಬರ್ 2022 (08:50 IST)
ಗುವಾಹಟಿ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಗುವಾಹಟಿಯಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ.

ಮೊದಲ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ಇಂದಿನ ಪಂದ್ಯ ಗೆದ್ದರೆ ಟೀಂ ಇಂಡಿಯಾ ಸರಣಿ ಗೆದ್ದಂತಾಗುತ್ತದೆ. ಆದರೆ ದ.ಆಫ್ರಿಕಾವೂ ಸುಲಭ ಎದುರಾಳಿಯಲ್ಲ.

ಮೊದಲ ಪಂದ್ಯದಲ್ಲಿ ಬೌಲರ್ ಗೆ ಸಹಕಾರಿಯಾಗುವ ಪಿಚ್ ನಿಂದಾಗಿ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ ರನ್ ಗಳಿಸಲು ತಿಣುಕಾಡಿತ್ತು. ಆದರೆ ಈ ಪಂದ್ಯದಲ್ಲೂ ಹೇಗೇ ಆಗುತ್ತದೆ ಎಂದು ಹೇಳಲಾಗದು. ಹೀಗಾಗಿ ರೋಹಿತ್ ಪಡೆ ಮೈಮರೆಯುವಂತಿಲ್ಲ. ಟಿ20 ವಿಶ್ವಕಪ್ ಗೆ ಆತ್ಮವಿಶ್ವಾಸ ಗಳಿಸುವ ದೃಷ್ಟಿಯಿಂದ ಈ ಸರಣಿಯನ್ನು ಗೆಲ್ಲುವುದು ಟೀಂ ಇಂಡಿಯಾಗೆ ಮುಖ್ಯವಾಗಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಸ್ಪ್ರೀತ್ ಬುಮ್ರಾ ಬಗ್ಗೆ ಅಪ್ ಡೇಟ್ ಕೊಟ್ಟ ರಾಹುಲ್ ದ್ರಾವಿಡ್