Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್ ಕ್ರಿಕೆಟ್: ಟೀಂ ಇಂಡಿಯಾ, ಬಾಂಗ್ಲಾ ಸೆಮಿಫೈನಲ್ ನಾಳೆ

ಏಷ್ಯನ್ ಗೇಮ್ಸ್ ಕ್ರಿಕೆಟ್: ಟೀಂ ಇಂಡಿಯಾ, ಬಾಂಗ್ಲಾ ಸೆಮಿಫೈನಲ್ ನಾಳೆ
ಹ್ಯಾಂಗ್ ಝೂ , ಗುರುವಾರ, 5 ಅಕ್ಟೋಬರ್ 2023 (17:42 IST)
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಕ್ರಿಕೆಟ್ ವಿಭಾಗದಲ್ಲಿ ನಾಳೆ ಟೀಂ ಇಂಡಿಯಾ ತಂಡ ಬಾಂಗ್ಲಾ ವಿರುದ್ಧ ಸೆಮಿಫೈನಲ್ ಪಂದ್ಯವಾಡಲಿದೆ.

ಋತುರಾಜ್ ಗಾಯಕ್ ವಾಡ್ ನೇತೃತ್ವದ ಟೀಂ ಇಂಡಿಯಾ ಯುವ ಪಡೆ ಕ್ವಾರ್ಟರ್ ಫೈನಲ್ ನಲ್ಲಿ ನೇಪಾಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿ ಮಿಂಚಿದ್ದರು.

ಇಂದು ಬಾಂಗ್ಲಾ ವಿರುದ್ಧ ಸೆಮಿಫೈನಲ್ ಆಡಲಿದೆ. ಭಾರತ ತಂಡ ಮೇಲ್ನೋಟಕ್ಕೆ ಬಲಿಷ್ಠ ತಂಡವಾಗಿದೆ. ಬ್ಯಾಟಿಂಗ್ ನಲ್ಲಿ ಮಿಂಚಿರುವ ಭಾರತ ಬೌಲಿಂಗ್ ನಲ್ಲಿ ರನ್ ನಿಯಂತ್ರಿಸಬೇಕಿದೆ. ಮಹಿಳಾ ಕ್ರಿಕೆಟ್ ತಂಡ ಈಗಾಗಲೇ ಫೈನಲ್ ಗೆದ್ದು ಚಿನ್ನ ತನ್ನದಾಗಿಸಿಕೊಂಡಿತ್ತು. ಈಗ ಪುರುಷರ ತಂಡವೂ ಫೈನಲ್ ಗೇರಲು ಸಕಲ ಪ್ರಯತ್ನ ನಡೆಸಲಿದೆ. ಈ ಪಂದ್ಯ ನಾಳೆ ಬೆಳಿಗ್ಗೆ 6.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್: ಆರ್ಚರಿಯಲ್ಲಿ ಮತ್ತೊಂದು ಚಿನ್ನ, ಪಿ.ವಿ. ಸಿಂಧು ಕನಸು ಭಗ್ನ