Select Your Language

Notifications

webdunia
webdunia
webdunia
webdunia

ಅಮೀರ್ ಖಾನ್ ಪುತ್ರನ ಜೊತೆ ಸಾಯಿಪಲ್ಲವಿ ಸುತ್ತಾಟ

Sai Pallavi Zunaid Khan

Krishnaveni K

ಹೈದರಾಬಾದ್ , ಮಂಗಳವಾರ, 13 ಫೆಬ್ರವರಿ 2024 (13:01 IST)
Photo Courtesy: Twitter
ಹೈದರಾಬಾದ್: ಸಹಜ ಸುಂದರಿ ನಟಿ ಸಾಯಿಪಲ್ಲವಿ ಮತ್ತು ಬಾಲಿವುಡ್ ತಾರೆ ಅಮೀರ್ ಖಾನ್ ಪುತ್ರ ಝುನೈದ್ ಖಾನ್ ಜೊತೆಯಾಗಿ ಓಡಾಡುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸದ್ಯದಲ್ಲೇ ಸಾಯಿಪಲ್ಲವಿ ಬಾಲಿವುಡ್ ಗೆ ಕಾಲಿಡುತ್ತಿದ್ದಾರೆ. ಇದೇ ವೇಳೆ ಝುನೈದ್ ಜೊತೆ ವಿದೇಶದಲ್ಲಿರುವ ಫೋಟೋ ನೋಡಿ ಎಲ್ಲರೂ ಹುಬ್ಬೇರಿಸಿದ್ದಾರೆ. ಸಾಯಿ ಪಲ್ಲವಿ ಹೆಸರು ಇದುವರೆಗೆ ಯಾವುದೇ ನಟನೊಂದಿಗೆ ಥಳುಕು ಹಾಕಿಕೊಂಡಿಲ್ಲ. ಝುನೈದ್ ಜೊತೆಗೂ ಸಾಯಿ ಸುತ್ತಾಡುತ್ತಿರುವುದು ಪ್ರೇಮಿಗಳಾಗಿ ಅಲ್ಲ. ಇಬ್ಬರೂ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ.

ಸಿನಿಮಾ ಚಿತ್ರೀಕರಣಕ್ಕಾಗಿ ಸಾಯಿಪಲ್ಲವಿ, ಝುನೈದ್ ವಿದೇಶದಲ್ಲಿದ್ದಾರೆ. ಚಿತ್ರೀಕರಣದ ನಡುವೆ ಬ್ರೇಕ್ ನಲ್ಲಿ ಇಬ್ಬರೂ ಜೊತೆಯಾಗಿ ಸ್ನೋ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದಾರೆ.  ಆ ಸಂದರ್ಭದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಝುನೈದ್ ಜೊತೆಗೆ ಹೊಸ ಸಿನಿಮಾದಲ್ಲಿ ಸಾಯಿಪಲ್ಲವಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಇಬ್ಬರೂ ಜಪಾನ್ ನಲ್ಲಿದ್ದಾರೆ. ಇದು ಝುನೈದ್ ಗೆ ಎರಡನೇ ಸಿನಿಮಾವಾದರೆ ಸಾಯಿಪಲ್ಲವಿಗೆ ಮೊದಲ ಬಾಲಿವುಡ್ ಸಿನಿಮಾ.

ಇತ್ತೀಚೆಗಷ್ಟೇ ಸಾಯಿಪಲ್ಲವಿ ಹಿಂದಿಯ ರಾಮಾಯಣ ಸಿನಿಮಾದಿಂದ ಹೊರಬಂದ ಸುದ್ದಿ ಕೇಳಿಬಂದಿತ್ತು. ರಣಬೀರ್ ಕಪೂರ್ ರಾಮನಾಗಿ ಅಭಿನಯಿಸಲಿರುವ ರಾಮಾಯಣ ಧಾರವಾಹಿಯಲ್ಲಿ ಸಾಯಿಪಲ್ಲವಿ ಸೀತೆಯ ಪಾತ್ರ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇತ್ತೀಚೆಗೆ ಸಾಯಿಪಲ್ಲವಿ ಜಾಗಕ್ಕೆ ಜಾಹ್ನವಿ ಕಪೂರ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗೆ ಹೊಡೆದು ಮೊಬೈಲ್ ಬಿಸಾಕಿ ಉದಿತ್ ನಾರಾಯಣ್ ಪುತ್ರ ಆದಿತ್ಯ ದುರ್ವರ್ತನೆ