Select Your Language

Notifications

webdunia
webdunia
webdunia
webdunia

ಅತ್ಯಾಚಾರ ಪ್ರಕರಣ; ಬಾಲಿವುಡ್ ಹಿರಿಯ ನಟ ಅಲೋಕ್ ನಾಥ್ ವಿರುದ್ಧ ಎಫ್ ಐಆರ್ ದಾಖಲು

ಅತ್ಯಾಚಾರ ಪ್ರಕರಣ; ಬಾಲಿವುಡ್ ಹಿರಿಯ ನಟ ಅಲೋಕ್ ನಾಥ್ ವಿರುದ್ಧ ಎಫ್ ಐಆರ್ ದಾಖಲು
ಮುಂಬೈ , ಗುರುವಾರ, 22 ನವೆಂಬರ್ 2018 (12:51 IST)
ಮುಂಬೈ : ಲೇಖಕಿ ವಿನ್ತಾ ನಂದಾ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಲೋಕ್ ನಾಥ್ ವಿರುದ್ಧ ಮುಂಬೈ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.


ಲೇಖಕಿ ವಿನ್ತಾ ನಂದಾ ಕಳೆದ ತಿಂಗಳು 'ಮೀ ಟೂ' ಅಭಿಯಾನದಡಿ ಅಲೋಕ್‌ ನಾಥ್‌ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಆರೋಪ ಮಾಡಿದ್ದರು. ಅಲ್ಲದೆ ಈ ಸಂಬಂಧ ಅ.17ರಂದು ಪೊಲೀಸರಿಗೆ ದೂರನ್ನೂ ಸಲ್ಲಿಸಿದ್ದರು.


ಈ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್‌ 376 (ರೇಪ್‌)ಅಡಿ ಹಿರಿಯ ನಟ ಅಲೋಕ್‌ ನಾಥ್‌ ವಿರುದ್ಧ ಮುಂಬೈನ ಅಂಧೇರಿಯ ಓಶಿವಾರಾ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಉಪ ಪೊಲೀಸ್‌ ಮುಖ್ಯಸ್ಥ ಪರಮ್‌ ಜಿತ್‌ ಸಿಂಗ್‌ ದಹಿಯಾ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ್ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್