Select Your Language

Notifications

webdunia
webdunia
webdunia
webdunia

ನಾಲ್ವರು ಕಾಮುಕರಿಂದ ಬೀದಿ ನಾಯಿ ಮೇಲೆ ಅತ್ಯಾಚಾರ

ನಾಲ್ವರು ಕಾಮುಕರಿಂದ  ಬೀದಿ ನಾಯಿ ಮೇಲೆ ಅತ್ಯಾಚಾರ
ಮುಂಬೈ , ಗುರುವಾರ, 22 ನವೆಂಬರ್ 2018 (06:28 IST)
ಮುಂಬೈ : ಗಂಡು ನಾಯಿ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ಮುಂಬೈನ ಪಶ್ಚಿಮ ಮಲಾಡ್ ಬಳಿಯ ಮಲ್ವಾಣಿ ಪ್ರದೇಶದಲ್ಲಿ ನಡೆದಿದೆ.


ಶನಿವಾರ ರಾತ್ರಿ 4ಜನ ಯುವಕರು ಒಟ್ಟಾಗಿ ಮಲ್ವಾಣಿ ಚರ್ಚ್ ಬಳಿ ವಾಸವಾಗಿದ್ದ ಬೀದಿ ನಾಯಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ಘಟನೆಯಿಂದ ನಾಯಿಯ ಹಿಂಬದಿಯ ಕಾಲು ಗಂಭೀರವಾಗಿ ಗಾಯಗೊಂಡಿದ್ದು, ಇದನ್ನು ನೋಡಿದ ಸ್ಥಳೀಯರು ಚಿಕಿತ್ಸೆಗೆಂದು ಪಶು ಆಸ್ಪತ್ರೆಗೆ ನಾಯಿಯನ್ನು ತೋರಿಸಿದಾಗ ಪ್ರಾಣಿ ಮೇಲೆ ಅತ್ಯಾಚಾರ ನಡೆದಿರುವ ವಿಷಯ ಬೆಳಕಿಗೆ ಬಂದಿದೆ. ಆಟೋ ಚಾಲಕರೊಬ್ಬರು ಈ ಘಟನೆಯನ್ನು ಕಣ್ಣಾರೆ ನೋಡಿರುವುದಾಗಿ ಹೇಳಿದ್ದಾರೆ.


ಈ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಅದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರ ಊರಲ್ಲಿ ಬಡವರ ಪಾಡು ಕೇಳೋರು ಯಾರು?