Select Your Language

Notifications

webdunia
webdunia
webdunia
webdunia

ಅನಿಮಲ್ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾರನ್ನು ಬಾಚಿ ತಬ್ಬಿ ಮುತ್ತಿಟ್ಟ ರಣಬೀರ್ ಕಪೂರ್

Ranbir Kapoor Rashmika Mandanna

Krishnaveni K

ಮುಂಬೈ , ಸೋಮವಾರ, 8 ಜನವರಿ 2024 (11:03 IST)
ಮುಂಬೈ: ಅನಿಮಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಚಿತ್ರತಂಡ ಮುಂಬೈನಲ್ಲಿ ಚಿತ್ರತಂಡ ಸಕ್ಸಸ್ ಪಾರ್ಟಿ ಆಯೋಜಿಸಿತ್ತು.

ಈ ಸಕ್ಸಸ್ ಪಾರ್ಟಿಗಾಗಿ ರಶ್ಮಿಕಾ ಹೈದರಾಬಾದ್ ನಿಂದ ಪುಷ್ಪ 2 ಸಿನಿಮಾ ಶೂಟಿಂಗ್ ಸ್ಥಗಿತಗೊಳಿಸಿ ಮುಂಬೈಗೆ ಬಂದಿಳಿದಿದ್ದರು. ಇನ್ನು, ಪಾರ್ಟಿಯಲ್ಲಿ ರಶ್ಮಿಕಾ ಅಲ್ಲದೆ, ನಾಯಕ ರಣಬೀರ್ ಕಪೂರ್, ನಟ ಅನಿಲ್ ಕಪೂರ್, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

ಸಕ್ಸಸ್ ಪಾರ್ಟಿಯಲ್ಲಿ ಎಲ್ಲರ ಗಮನ ಸೆಳೆದಿದ್ದು ರಶ್ಮಿಕಾ ಮತ್ತು ರಣಬೀರ್. ಪಾರ್ಟಿಯಲ್ಲಿ ರಶ್ಮಿಕಾರನ್ನು ನೋಡುತ್ತಿದ್ದಂತೇ ಆಕೆಯನ್ನು ಬಾಚಿ ತಬ್ಬಿಕೊಂಡ ರಣಬೀರ್ ಪ್ರೀತಿಯಿಂದ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬ್ಲ್ಯಾಕ್ ಥೀಮ್ ಡ್ರೆಸ್ ನಲ್ಲಿ ಬಂದಿದ್ದ ನಟರು ಬಳಿಕ ಗ್ರೂಪ್ ಫೋಟೋ ತೆಗೆದುಕೊಂಡು ಅನಿಮಲ್ ಸಕ್ಸಸ್ ಆದ ಖುಷಿಯನ್ನು ಜೊತೆಯಾಗಿ ಸಂಭ್ರಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇದು ಯಶ್ ಅವರಾ? ರಿಷಬ್ ಶೆಟ್ಟಿನಾ? ಫ್ಯಾನ್ಸ್ ಕನ್ ಫ್ಯೂಸ್!