ಪ್ರಿಯಾಂಕ-ನಿಕ್​​ ​ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ

ಗುರುವಾರ, 6 ಡಿಸೆಂಬರ್ 2018 (07:04 IST)
ನವದೆಹಲಿ : ಮಂಗಳವಾರ ದೆಹಲಿಯಲ್ಲಿ ಅದ್ದೂರಿಯಾಗಿ ನಡೆದ ಪ್ರಿಯಾಂಕಾ-ನಿಕ್​​ ​ಆರತಕ್ಷತೆ ಕಾರ್ಯಕ್ರಮಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು.


ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್ ಜೋಡಿ ಶನಿವಾರ ಹಾಗೂ ಭಾನುವಾರ ಎರಡೂ ಪದ್ಧತಿಗಳಂತೆ ಜೋಧ್​ಪುರದಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ. ನಂತರ ದೆಹಲಿ ತಾಜ್​ ಪ್ಯಾಲೆಸ್​ ಹೋಟೆಲ್​ನಲ್ಲಿ ಮಂಗಳವಾರ ಪ್ರಿಯಾಂಕ -ನಿಕ್​​ ​ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಾಗಿ ಹೂಗುಚ್ಚ ಕೊಟ್ಟು ನವದಂಪತಿಗಳಿಗೆ ಶುಭ ಕೋರಿದ್ದಾರೆ.


ದೆಹಲಿ ರಿಸೆಪ್ಷನ್ ನಲ್ಲಿ ಪ್ರಿಯಾಂಕ ಚೋಪ್ರಾ ಸಿಲ್ವರ್​ ಬಣ್ಣದ ಲೆಹಂಗಾ ಜತೆಗೆ ಮ್ಯಾಚ್​ ಆಗುವ ಆಭರಣಗಳನ್ನು ತೊಟ್ಟು ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ್ದರೆ, ನಿಕ್ ಜೋನಾಸ್ ಕಪ್ಪು ಬಣ್ಣದ ಸೂಟ್​​ ಧರಿಸಿ ಪಾಶ್ಚಾತ್ಯ ಲುಕ್ನಲ್ಲಿ ಮಿಂಚಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಪೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸೆಲೆಬ್ರಿಟಿ ಯಾರು ಗೊತ್ತಾ?