Select Your Language

Notifications

webdunia
webdunia
webdunia
webdunia

ಸಡಕ್-2 ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿರುವ ಮಹೇಶ್ ಭಟ್..

ಸಡಕ್-2 ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿರುವ ಮಹೇಶ್ ಭಟ್..
ಬೆಂಗಳೂರು , ಗುರುವಾರ, 20 ಸೆಪ್ಟಂಬರ್ 2018 (19:15 IST)
19 ವರ್ಷಗಳ ನಂತರ ಸಡಕ್ 2 ಚಿತ್ರದ ಮೂಲಕ ಮಹೇಶ್ ಭಟ್ ನಿರ್ದೇಶನದ ಕುರ್ಚಿಗೆ ಮರಳುತ್ತಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್, ಆದಿತ್ಯ ರಾಯ್ ಕಪೂರ್, ಪೂಜಾ ಭಟ್ ಮತ್ತು ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿರಲಿದ್ದು ಚಿತ್ರ 2020 ರಲ್ಲಿ ತೆರೆಕಾಣಲಿದೆ.
19 ವರ್ಷಗಳ ದೀರ್ಘಾವಧಿಯ ನಂತರ ಮಹೇಶ್ ಭಟ್ ನಿರ್ದೇಶಕನ ಕುರ್ಚಿಗೆ ಮರಳಿದ್ದಾರೆ ಮತ್ತು ಈ ಬಾರಿ ಮತ್ತು ಮಗಳು ಆಲಿಯಾ ಭಟ್ ಅವರಿಗೆ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಂಜಯ್ ದತ್ ಹಾಗೂ ಪೂಜಾ ಸಡಕ್ (1991) ನ ಭಾಗವಾಗಿದ್ದವರು, ಇದು ವೇಶ್ಯಾಗೃಹದಿಂದ ಅವನು ಪ್ರೀತಿಸುವ ಹುಡುಗಿಯನ್ನು ರಕ್ಷಿಸಲು ಪ್ರಯತ್ನಿಸುವ ಟ್ಯಾಕ್ಸಿ ಡ್ರೈವರ್‌ನ ಕಥೆಯಾಗಿದೆ. ಮೊದಲ ಚಿತ್ರದ 29 ವರ್ಷಗಳ ನಂತರ ಸಡಕ್-2 2020 ರಲ್ಲಿ ಬಿಡುಗಡೆಯಾಗಲಿದೆ.
 
ಮಹೇಶ್ ಭಟ್ ಅವರ ಜನ್ಮದಿನದಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಆಲಿಯಾ, ಆತ್ಮೀಯ್ ಡ್ಯಾಡಿ, ನಿಮ್ಮ 70 ನೇ ಜನ್ಮದಿನದದಂದು ನಾನು ಕೇಳುವ ಅಥವಾ ಕನಸು ಕಾಣುವಂತಹ ದೊಡ್ಡ ಉಡುಗೊರೆಯನ್ನು ನೀಡಿದ್ದೀರಿ. ಸಡಕ್ 2 ಕನಸು ನನಸಾಗುವಂತಹದು.. ನಾನು ಯೋಚಿಸಿದ್ದನ್ನು ನೀವು ನಿಜವಾಗಿಸದಿದ್ದರೆ ಅದು ನಿಜವಾಗುತ್ತಿರಲಿಲ್ಲ. ನನ್ನ ಹೃದಯ ಮತ್ತು ಆತ್ಮದಾಳದಿಂದ ಧನ್ಯವಾದಗಳು ಡ್ಯಾಡಿ. ಇದು ಜೀವನದ, ಚಿತ್ರದ ಮತ್ತು ಹೆಚ್ಚಿನದರ ಆವಿಷ್ಕಾರದ ಪ್ರಯಾಣವಾಗಿರಲಿದೆ.. ತಂದೆ ಮತ್ತು ಮಗಳದು. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡು ತಾವು ಹಾಗೂ ಮಹೇಶ್ ಭಟ್ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
 
ಸಂಜಯ್ ದತ್ ಹಾಗೂ ಪೂಜಾ ದತ್ ಸಹ ಮಹೇಶ್ ಭಟ್ ಅವರಿಗೆ ತಮ್ಮ ಧನ್ಯವಾದಗಳನ್ನು ತಿಳಿಸಿದ್ದಾರೆ. ಆಲಿಯಾ ಇದೇ ಮೊದಲ ಬಾರಿಗೆ ಮಹೇಶ್ ಭಟ್ ನಿರ್ದೇಶನದಲ್ಲಿ ಬಣ್ಣಹಚ್ಚಲಿದ್ದು ಚಿತ್ರ ಹೇಗೆ ಮೂಡಿಬರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಇನ್ನಿಲ್ಲ!