Select Your Language

Notifications

webdunia
webdunia
webdunia
webdunia

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಇನ್ನಿಲ್ಲ!

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಇನ್ನಿಲ್ಲ!
ಬೆಂಗಳೂರು , ಗುರುವಾರ, 20 ಸೆಪ್ಟಂಬರ್ 2018 (15:04 IST)
ಬೆಂಗಳೂರು: ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸದಾಶಿವ ಬ್ರಹ್ಮಾವರ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಸೆಪ್ಟೆಂಬರ್ 19) ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


ತಮ್ಮ ನಿಧನದ ಸುದ್ದಿಯನ್ನು ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿಸಬಾರದೆಂದು ಸದಾಶಿವ ಬ್ರಹ್ಮಾವರ್ ತಿಳಿಸಿದ್ದ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯ ಬಳಿಕ ಇಂದು ವಿಷಯ ಬಹಿರಂಗಗೊಂಡಿದೆ.


ಕನ್ನಡದ ಖ್ಯಾತ ಪೋಷಕ ಕಲಾವಿದ ಸದಾಶಿವ ಬ್ರಹ್ಮಾವರ್ ಇದುವರೆಗೆ ನೂರಾರು ಸಿನಿಮಾಗಳಲ್ಲಿ ಹಾಗೂ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣಹಚ್ಚಿದ್ದಾರೆ. ಕಿಚ್ಚ ಸುದೀಪ್‌, ಡಾ. ರಾಜ್‌ಕುಮಾರ್‌, ಅಂಬರೀಶ್‌ ಸೇರಿ ಹಲವು ಪ್ರಸಿದ್ಧ ನಟರ ಜತೆ ಅಭಿನಯಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ 'ನೀರ್ ದೋಸೆ' ಸಿನಿಮಾ ನಿರ್ಮಾಪಕ ಆರ್. ಪ್ರಸನ್ನ ಅರೆಸ್ಟ್