Select Your Language

Notifications

webdunia
webdunia
webdunia
webdunia

ರೂ.100 ಕೋಟಿ ಕ್ಲಬ್ ಸೇರಿದ ಹೃತಿಕ್ ರೋಷನ್ ಚಿತ್ರ

ರೂ.100 ಕೋಟಿ ಕ್ಲಬ್ ಸೇರಿದ ಹೃತಿಕ್ ರೋಷನ್ ಚಿತ್ರ
Mumbai , ಸೋಮವಾರ, 6 ಫೆಬ್ರವರಿ 2017 (10:51 IST)
ಬಾಲಿವುಡ್‍ನ ಮತ್ತೊಂದು ಚಿತ್ರ ರೂ.100 ಕೋಟಿ ಕ್ಲಬ್ ಸೇರಿದೆ. ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಅಭಿನಯದ ಕಾಬಿಲ್ ಚಿತ್ರ ದೇಶದಾದ್ಯಂತ ರೂ.106.2 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ. 
 
ಜನವರಿ 25ರಂದು ಶಾರುಖ್ ಖಾನ್ ಅಭಿನಯದ ರಯೀಸ್ ಚಿತ್ರದ ಜತಗೆ ಬಿಡುಗಡೆಯಾಗ ಕಾಬಿಲ್ ಶನಿವಾರ ರೂ.9.22 ಕೋಟಿ ವಸೂಲಿ ಮಾಡುವ  ಮೂಲಕ ಒಟ್ಟು ರೂ.106.2 ಕೋಟಿ ಗಳಿಕೆ ಮಾಡಿದೆ ಎಂದು ಹೃತಿಕ್ ತಂದೆ ಹಾಗೂ ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.
 
ಸಂಜಯ್ ಗುಪ್ತಾ ನಿರ್ದೇಶನದ ಈ ಚಿತ್ರವನ್ನು ರೂ.50 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಕುರುಡರ ಪ್ರೇಮಕಥೆಯಾದ ಈ ಚಿತ್ರಕ್ಕೆ ಬಾಲಿವುಡ್‌ ಪ್ರಮುಖರಿಂದ ಮೆಚ್ಚುಗೆ ಮಹಾಪೂರವೇ ಹರಿದುಬಂದಿತ್ತು. ಪ್ರೇಕ್ಷಕರು ಚಿತ್ರವನ್ನು ಕೈಹಿಡಿದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೋಸೆ ಚಾಲೆಂಜ್‌ನಲ್ಲಿ ಗೆದ್ದ ’ಸಿಂಗಂ’ ಸೂರ್ಯ