Select Your Language

Notifications

webdunia
webdunia
webdunia
webdunia

ದೋಸೆ ಚಾಲೆಂಜ್‌ನಲ್ಲಿ ಗೆದ್ದ ’ಸಿಂಗಂ’ ಸೂರ್ಯ

ದೋಸೆ ಚಾಲೆಂಜ್‌ನಲ್ಲಿ ಗೆದ್ದ ’ಸಿಂಗಂ’ ಸೂರ್ಯ
Chennai , ಸೋಮವಾರ, 6 ಫೆಬ್ರವರಿ 2017 (10:45 IST)
ಕೋಲಿವುಡ್‌ ಜತೆಗೆ ಟಾಲಿವುಡ್‌ನಲ್ಲೂ ಒಳ್ಳೇ ಕ್ರೇಜ್ ಸಂಪಾದಿಸಿಕೊಂಡಿರುವ ನಟ ಎಂದರೆ ಸೂರ್ಯ. ಕೇವಲ ನಟನೆ ಅಷ್ಟೇ ಅಲ್ಲ, ಅವರಲ್ಲಿ ಇನ್ನೊಂದು ಕೋನವೂ ಇದೆ. ಅದೇನು ಅಂತಿದ್ದೀರಾ...? ಕೇವಲ ನಟನೆ ಅಷ್ಟೇ ಅಲ್ಲ ದೋಸೆ ಹಾಕುವುದೂ ಚೆನ್ನಾಗಿ ಗೊತ್ತು ಈ ’ಸಿಂಗಂ’ಗೆ.
 
ಇತ್ತೀಚೆಗೆ ಸೂರ್ಯ ತನ್ನ ಟ್ವಿಟ್ಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಸ್ಟೌವ್ ಮುಂದೆ ನಿಂತು ದೋಸೆ ಹಾಕುತ್ತಿದ್ದರೆ, ಇನ್ನೊಂದು ಫೋಟೋದಲ್ಲಿ ತನ್ನ ಪತ್ನಿ ಜ್ಯೋತಿಕಾ ಜತೆಗೆ ದೋಸೆ ತೋರಿಸುತ್ತಾ ಪೋಸುಕೊಟ್ಟಿದ್ದಾರೆ.
 
ಪ್ರೀತಿಯಿಂದ ದೋಸೆ ಮಾಡಿದ್ದೇನೆಂದು.. ನಟ ಮಾಧವನ್, ನಿರ್ಮಾಪಕರ ವೆಂಕಟ್ ಪ್ರಭು, ಸಂಗೀತ ನಿರ್ದೇಶಕ ಹರೀಶ್ ಶಂಕರ್, ದೇವಿಶ್ರೀ ಪ್ರಸಾದ್‌ಗೆ ಚಾಲೆಂಜ್ ಕೂಡ ಹಾಕಿದ್ದಾರೆ. ಇದಕ್ಕೆ ಮಾಧವನ್, ವೆಂಕಟ್ ಪ್ರಭು ಉತ್ತರಿಸುತ್ತಾ...ಚಾಲೆಂಜ್ ಸ್ವೀಕರಿಸಿರುವುದಾಗಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಸಿನಿಮೋತ್ಸವದಲ್ಲಿ ’ರಾಮಾ ರಾಮ ರೇ’