Select Your Language

Notifications

webdunia
webdunia
webdunia
webdunia

'ಪದ್ಮಾವತಿ' ಚಿತ್ರಕ್ಕೆ ದೀಪಿಕಾ ನಾಯಕಿಯಾಗುತ್ತಿರುವುದು ಖಚಿತ

'ಪದ್ಮಾವತಿ' ಚಿತ್ರಕ್ಕೆ ದೀಪಿಕಾ ನಾಯಕಿಯಾಗುತ್ತಿರುವುದು ಖಚಿತ
ಮುಂಬೈ , ಶನಿವಾರ, 9 ಜುಲೈ 2016 (12:06 IST)
ಮುಂಬರುವ ಚಿತ್ರ 'ಪದ್ಮಾವತಿ' ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗುತ್ತಿರುವುದು ಖಚಿತವಾಗಿದೆ. ಮ್ಯೂಸಿಕ್ ಡೈರೆಕ್ಟರ್ ಶ್ರೇಯಾಸ್ ಪುರಾನಿಕ್ ಈ ಕುರಿತು ಖಚಿತಪಡಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ರಣಬೀರ್ ಜತೆಗೆ ಬೀಪ್ಸ್ ನಟಿಸಲಿದ್ದಾರೆ. 



















ಈ ಬಗ್ಗೆ ಮ್ಯೂಸಿಕ್ ಡೈರೆಕ್ಟರ್ ಪುರಾಣಿಕ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ದೀಪಿಕಾ ನಾಯಕಿಯಾಗುತ್ತಿರುವುದರ ಬಗ್ಗೆ ಘೋಷಣೆ ಮಾಡಿದ್ದಾರೆ. ಪುರಾಣಿಕ್ ಈ ಚಿತ್ರದಲ್ಲಿ ಮ್ಯೂಸಿಕ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

'ರಾಮಲೀಲಾ' ಹಾಗೂ 'ಬಾಜಿರಾವ್ ಮಸ್ತಾನಿ' ಚಿತ್ರದ ಸಕ್ಸಸ್ ಬಳಿಕ ಮತ್ತೆ ಸಂಜಯ್ ಲೀಲಾ ಬನ್ಸಾಲಿ ದೀಪಿಕಾ ಹಾಗೂ ರಣಬೀರ್ ಜತೆಗೂಡಿ ಕೆಲಸ ಮಾಡಲಿದ್ದಾರೆ.

ಈಗಾಗಲೇ ಭಾಜೀರಾವ್ ಮಸ್ತಾನಿ ಹಾಗೂ ರಾಮ್ ಲೀಲಾ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿರುವ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇದೀಗ ಮತ್ತೊಮ್ಮೆ ಇದೇ ಜೋಡಿಯನ್ನು ಇಟ್ಟುಕೊಂಡು ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ. ಈ ಸಿನಿಮಾ ಇದೇ ವರ್ಷ ಸಪ್ಟಂಬರ್‌ನಲ್ಲಿ ಸೆಟ್ಟೇರಲಿದೆಯಂತೆ.
 
ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇನ್ನು ಡಿಂಪಲ್ ಹುಡುಗಿ ದೀಪಿಕಾ ಪಡುಕೋಣಿ ಅವರು ರಾಣಿ ಪದ್ಮಾವತಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟಿ ಹಾಕಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಪರಪುರಷನ ಜತೆಗೆ ಕರಿಷ್ಮಾ.. ಕರಿಷ್ಮಾ ನೋಡಿ ಕೆರಳಿಲ್ಲ ಎಂದ ಮಾಜಿ ಪತಿ ಸಂಜಯ್