Select Your Language

Notifications

webdunia
webdunia
webdunia
webdunia

ಆಯಮಿ ಜಾಕ್ಸನ್ ಡಿ.ಎನ್.ಎ ಟೆಸ್ಟ್ ‌ ಮಾಡಿಸಿಕೊಂಡಿದ್ದು ಇದೇ ಕಾರಣಕ್ಕಾಗಿಯಂತೆ!

ಆಯಮಿ ಜಾಕ್ಸನ್ ಡಿ.ಎನ್.ಎ ಟೆಸ್ಟ್ ‌ ಮಾಡಿಸಿಕೊಂಡಿದ್ದು ಇದೇ ಕಾರಣಕ್ಕಾಗಿಯಂತೆ!
ಮುಂಬೈ , ಸೋಮವಾರ, 2 ಏಪ್ರಿಲ್ 2018 (06:30 IST)
ಮುಂಬೈ : ಕನ್ನಡದ ‘ದಿ ವಿಲನ್ ' ಚಿತ್ರದಲ್ಲಿ ಸುದೀಪ್ ಜತೆ ನಾಯಕಿಯಾಗಿ ನಟಿಸಿದ ಬಾಲಿವುಡ್ ‌ ಸ್ಟಾರ್ ನಟಿ ಆಯಮಿ ಜಾಕ್ಸನ್ ‌ ಇತ್ತೀಚಿಗೆ ಡಿ.ಎನ್.ಎ ಟೆಸ್ಟ್ ‌ ಮಾಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.


26 ವಯಸ್ಸಿನ ಆಯಮಿ ಜಾಕ್ಸನ್ ಅವರು ಮಾಡೆಲಿಂಗ್ ಮೂಲಕ ಫ್ಯಾಷನ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಅವರು ನಂತರ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದರು.
ಆಯಮಿ ಜಾಕ್ಸನ್ ಅವರು ಬ್ರಿಟನ್ ಮೂಲದವರಾಗಿದ್ದರೂ ನೋಡಲು ಬ್ರಿಟನ್ ಪ್ರಜೆಯಂತೆ ಕಾಣುತ್ತಿಲ್ಲ ಎಂಬ ಸಂದೇಹ  ಅವರ ಅಭಿಮಾನಿಗಳಲ್ಲಿದ್ದ ಕಾರಣ ಈ ಸಂದೇಹವನ್ನು ಬಗೆಹರಿಸಲು ಹಾಗೂ ತಮ್ಮ ಪೂರ್ವಜರಿಂದ ಯಾವ ಹೆರಿಡಿಟಿ ಕ್ಯಾರಕ್ಟರ್ ತಮ್ಮಲ್ಲಿ ಕ್ಯಾರಿ ಆಗಿವೆ ಎನ್ನುವ ಕುತೂಹಲದಿಂದ ಡಿ.ಎನ್.ಎ ಟೆಸ್ಟ್ ‌ ಮಾಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಇವರು ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಅವರು ಡಿ.ಎನ್.ಎ ಟೆಸ್ಟ್ ಮಾಡಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ರಾಜರಥ’ ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್ ಹೇಳಿರುವುದಾದರೂ ಏನು ಗೊತ್ತಾ…?