Select Your Language

Notifications

webdunia
webdunia
webdunia
webdunia

ಪತ್ನಿ ಶ್ರೀದೇವಿ ಬಗ್ಗೆ ಬೋನಿ ಕಪೂರ್ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ ಗೊತ್ತಾ?

ಪತ್ನಿ ಶ್ರೀದೇವಿ ಬಗ್ಗೆ ಬೋನಿ ಕಪೂರ್ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ ಗೊತ್ತಾ?
ಮುಂಬೈ , ಗುರುವಾರ, 1 ಮಾರ್ಚ್ 2018 (09:25 IST)
ಮುಂಬೈ: ಕಳೆದ ಶನಿವಾರ ರಾತ್ರಿ ದುಬೈನಲ್ಲಿ ಸಾವನ್ನಪ್ಪಿದ ಬಾಲಿವುಡ್ ತಾರೆ ಶ್ರೀದೇವಿ ಅಂತ್ಯ ಸಂಸ್ಕಾರಗಳು ನಿನ್ನೆ ಮುಂಬೈನಲ್ಲಿ ಆಕೆಯ ಇಷ್ಟದಂತೇ ನೆರವೇರಿದೆ. ಇದಾದ ಬಳಿಕ ಪತಿ ಬೋನಿ ಕಪೂರ್ ಟ್ವಿಟರ್ ಮೂಲಕ ತಮ್ಮ ನೋವು ಹಂಚಿಕೊಂಡಿದ್ದಾರೆ.

ಸುದೀರ್ಘ ಪತ್ರ ಬರೆದ ಬೋನಿ ತಮ್ಮ ಪ್ರೀತಿಯ ಪತ್ನಿಯ ಅಗಲಿಕೆಯ ನೋವು ಹಂಚಿಕೊಂಡಿದ್ದಾರೆ. ಆ ಪತ್ರದಲ್ಲಿ ಏನಿದೆ ಎಂಬುದನ್ನು ನೀವೇ ಓದಿ.

‘ಒಬ್ಬ ಸ್ನೇಹಿತೆ, ಪತ್ನಿ ಮತ್ತು ಇಬ್ಬರು ಮಕ್ಕಳ ತಾಯಿಯನ್ನು ಕಳೆದುಕೊಳ್ಳುವ ದುಃಖವನ್ನು ಮಾತಿನಲ್ಲಿ ಹೇಳಲಾಗದು. ಈ ಸಂದರ್ಭದಲ್ಲಿ ನಮಗೆ ಸಾಂತ್ವನ ನೀಡಿದ ನಮ್ಮ ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬದವರು, ಅಸಂಖ್ಯಾತ ಶ್ರೀದೇವಿ ಅಭಿಮಾನಿಗಳಿಗೆ ಧನ್ಯವಾದಗಳು. ಅರ್ಜುನ್ ಮತ್ತು ಅಂಶುಲಾ ರೂಪದಲ್ಲಿ ನನಗೆ ಮತ್ತು ನನ್ನಿಬ್ಬರು ಹೆಣ್ಣು ಮಕ್ಕಳಾದ ಖುಷಿ, ಜಾಹ್ನವಿಗೆ ಬೆನ್ನುಲುಬು ಸಿಕ್ಕಿದ್ದು ನಮ್ಮ ಪುಣ್ಯ. ಒಂದು ಕುಟುಂಬವಾಗಿ, ಜತೆಯಾಗಿ ನಾವು ಈ ತುಂಬಲಾರದ ನಷ್ಟವನ್ನು ಎದುರಿಸಲು ಪ್ರಯತ್ನಿಸಿದೆವು.

ಜಗತ್ತಿಗೆ ಆಕೆ ಅವರ ಚಾಂದಿನಿ..ಅದ್ಭುತ ಅಭಿನೇತ್ರಿ.. ಅವರ ಶ್ರೀದೇವಿ.. ಆದರೆ ನನಗೆ ಆಕೆ ಸ್ನೇಹಿತೆ, ಪತ್ನಿ, ನಮ್ಮಿಬ್ಬರು ಮಕ್ಕಳ ತಾಯಿ.. ನನ್ನ ಸಂಗಾತಿ. ನಮ್ಮ ಮಕ್ಕಳಿಗೆ ಅವಳು ಎಲ್ಲಾ ಆಗಿದ್ದಳು..ಅವರ ಜೀವನವೇ ಆಗಿದ್ದಳು. ಅವಳ ಸುತ್ತ ನಮ್ಮ ಕುಟುಂಬ ನಡೆಯುತ್ತಿತ್ತು.

ನನ್ನ ಪತ್ನಿ ಮತ್ತು ಖುಷಿ ಮತ್ತು ಜಾಹ್ನವಿಯ ಮೆಚ್ಚಿನ ಅಮ್ಮನಿಗೆ ವಿದಾಯ ಹೇಳುವಾಗ ನಿಮ್ಮೆಲ್ಲರಲ್ಲಿ ಒಂದೇ ಒಂದು ವಿನಂತಿ. ನಮ್ಮ ದುಃಖವನ್ನು ಖಾಸಗಿಯಾಗಿ ಕಳೆಯಲು ಬಿಡಿ. ಶ್ರೀ ಬಗ್ಗೆ ಮಾತನಾಡಲು ಬಯಸಿದರೆ ಆಕೆಯ ಜತೆಗಿನ ನಿಮ್ಮ ಅದ್ಭುತ ನೆನಪುಗಳನ್ನು ಮೆಲುಕು ಹಾಕಿ. ಆಕೆ ಸ್ಥಾನ ತುಂಬಲಾರದ ಅದ್ಭುತ ನಟಿಯಾಗಿದ್ದವಳು. ಅದಕ್ಕೆ ಗೌರವ ಕೊಡಿ. ಒಬ್ಬ ನಟಿಯ ಜೀವನಕ್ಕೆ ಯಾವತ್ತೂ ಅಂತ್ಯವಿರುವುದಿಲ್ಲ. ಯಾಕೆಂದರೆ ಬೆಳ್ಳಿ ಪರದೆಯ ಮೇಲೆ ಸದಾ ಆಕೆ ಜೀವಂತವಾಗಿರುತ್ತಾಳೆ.

ಸದ್ಯಕ್ಕೆ ನನಗೆ ನನ್ನಿಬ್ಬರು ಮಕ್ಕಳನ್ನು ಕಾಪಾಡುವ ಜವಾಬ್ದಾರಿಯಿದೆ ಮತ್ತು ಶ್ರೀ ಇಲ್ಲದೇ ಜೀವನದಲ್ಲಿ ಮುಂದೆ ಸಾಗಲು ದಾರಿ ಹುಡುಕಬೇಕಾಗಿದೆ. ಆಕೆ ನಮ್ಮ ಜೀವನ, ಶಕ್ತಿ ಮತ್ತು ನಗುವಿನ ಕಾರಣವಾಗಿದ್ದಳು. ಆಕೆಯನ್ನು ನಾವು ಲೆಕ್ಕ ಹಾಕಲಾಗದಷ್ಟು ಪ್ರೀತಿಸುತ್ತೇವೆ.

ಶಾಂತಿಯಿಂದ ಚಿರ ನಿದ್ರೆ ಮಾಡು ನನ್ನ ಪ್ರೀತಿಯೇ. ನಿನ್ನ ಹೊರತಾಗಿ ನಮ್ಮ ಜೀವನ ಖಂಡಿತಾ ಮೊದಲಿನಂತಿರದು.
-ಬೋನಿ ಕಪೂರ್.

ಹೀಗೆಂದು ಭಾವನಾತ್ಮಕವಾಗಿ ಬೋನಿ ಕಪೂರ್ ಸುದೀರ್ಘ ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಮಾತ್ರ ಶ್ರೀದೇವಿ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತಾಡಲಿಲ್ಲ ಯಾಕೆ?