Select Your Language

Notifications

webdunia
webdunia
webdunia
webdunia

ಶ್ರೀದೇವಿ ಅಂತಿಮ ಕ್ರಿಯೆಗಳು ಪ್ರಸಾರವಾಗಲ್ಲ!

ಶ್ರೀದೇವಿ ಅಂತಿಮ ಕ್ರಿಯೆಗಳು ಪ್ರಸಾರವಾಗಲ್ಲ!
ಮುಂಬೈ , ಬುಧವಾರ, 28 ಫೆಬ್ರವರಿ 2018 (16:26 IST)
ಮುಂಬೈ: ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಮೃತದೇಹ ಈಗಾಗಲೇ ಸೇವಾ ಸಮಾಜ ಚಿತಾಗಾರಕ್ಕೆ ತಲುಪಿದ್ದು, ಅಂತಿಮ ವಿಧಿ ವಿಧಾನ ಕ್ರಿಯೆಗಳು ಪ್ರಾರಂಭವಾಗಿದೆ.
 

ಇಲ್ಲಿ ಸಾವಿರಾರು ಜನ ಅಭಿಮಾನಿಗಳು ಜಮಾಯಿಸಿದ್ದು, ತಮ್ಮ ಆರಾಧ್ಯ ದೇವತೆಗೆ ಬೀಳ್ಕೊಡುಗೆ ನೀಡುತ್ತಿದ್ದಾರೆ. ಮುಂಬೈಯಲ್ಲಿ ಸದ್ಯಕ್ಕೆ ಯಾವುದೇ ತಾರೆಯರಿಗೂ ಸಿಗದ ಅಂತಿಮ ನಮನ ಅಭಿಮಾನಿಗಳಿಂದ ನೆಚ್ಚಿನ ನಟಿಗೆ ಸಿಗುತ್ತಿದೆ.

ಇನ್ನು, ಅಂತಿಮ ವಿಧಿ ವಿಧಾನಗಳು ಸಂಪೂರ್ಣ ಖಾಸಗಿಯಾಗಿ ನಡೆಯಲಿದ್ದು, ಮಾಧ್ಯಮಗಳು, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸರ್ಕಾರಿ ಗೌರವಗಳೊಂದಿಗೆ ಅಂತಿಮ ಕ್ರಿಯೆ ನಡೆಯಲಿದೆ. ಆದರೆ ಅಂತಿಮ ವಿಧಿ ವಿಧಾನಗಳನ್ನು ನೇರ ಪ್ರಸಾರ ಮಾಡದಂತೆ ಶ್ರೀದೇವಿ ಕುಟುಂಬ ಈಗಾಗಲೇ ಮಾಧ್ಯಮಗಳಿಗೆ ಮನವಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀದೇವಿಯವರು ಕೊನೆಯದಾಗಿ ನಟಿಸಿದ ಜಾಹಿರಾತು ಇಲ್ಲಿದೆ ನೋಡಿ - ವೈರಲ್ ವಿಡಿಯೋ