Select Your Language

Notifications

webdunia
webdunia
webdunia
webdunia

‘ಪಿರಂಗಿಪುರ’ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್‌‌ ಶೆಟ್ಟಿ ನಟಿಸಲಿದ್ದಾರಾ…?

‘ಪಿರಂಗಿಪುರ’ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್‌‌ ಶೆಟ್ಟಿ ನಟಿಸಲಿದ್ದಾರಾ…?
ಬೆಂಗಳೂರು , ಶುಕ್ರವಾರ, 22 ಜೂನ್ 2018 (14:42 IST)
ಬೆಂಗಳೂರು : ಸಂಚಾರಿ ವಿಜಯ್ ನಟಿಸಲಿರುವ ‘ಪಿರಂಗಿಪುರ’ ಚಿತ್ರ ಇನ್ನೂ ಪ್ರಾರಂಭವಾಗದಿದ್ದರೂ ಇದೀಗ ಈ ಚಿತ್ರದ  ಬಗ್ಗೆ ಹೊಸ ವಿಚಾರವೊಂದು ಕೇಳಿಬರುತ್ತಿದೆ.


ಮೊದಲ ಬಾರಿಗೆ ಜನಾರ್ದನ್ ಪಿ.ಜಾನಿ ಬರೆದು ನಿರ್ದೇಶಿಸಲಿರುವ ಪಿರಂಗಿಪುರ’ ಚಿತ್ರದಲ್ಲಿ ಬಾಲಿವುಡ್‌‌‌ನ ಸುನಿಲ್‌‌ ಶೆಟ್ಟಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಈ ಮೊದಲು ಚಿತ್ರತಂಡ ಹೇಳಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸುನಿಲ್ ಶೆಟ್ಟಿ, ಸುದೀಪ್ ಅಭಿನಯದ `ಪೈಲ್ವಾನ್' ಬಿಟ್ಟರೆ ಬೇರೆ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.


ಆದರೆ ಈ ಬಗ್ಗೆ ನಿರ್ದೇಶಕ ಜನಾರ್ಧನ್ ಅವರನ್ನು ಕೇಳಿದರೆ, `ಸುನಿಲ್ ಶೆಟ್ಟಿ ಅವರಿಗೆ ಕಥೆ ಹೇಳಿ ಅವರು ಒಪ್ಪಿಕೊಂಡಿದ್ದೂ ಆಗಿದೆ. ಆದರೆ, ಇನ್ನೂ ಅಗ್ರಿಮೆಂಟ್ ಆಗಿಲ್ಲ. ಕೆಲವೇ ದಿನಗಳಲ್ಲಿ ಅಗ್ರಿಮೆಂಟ್ ಆಗಲಿದೆ' ಎಂದಿದ್ದಾರೆ. ಆದರೂ ಸುನಿಲ್ ಶೆಟ್ಟಿ, `ಪಿರಂಗಿಪುರ' ದಲ್ಲಿ ನಟಿಸುತ್ತಾರೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಂಕರ್ ಅಶ್ವಥ್ ‘ದೇವರಂಥ ಮನುಷ್ಯ’ ಎಂದು ಬಿರುದು ಕೊಟ್ಟಿದ್ದು ಕನ್ನಡದ ಈ ಖ್ಯಾತ ನಟನಿಗೆ