Select Your Language

Notifications

webdunia
webdunia
webdunia
webdunia

ಸೀಕ್ರೆಟ್ ಆಗಿ ಹಾಲಿ ಡೇ ಎಂಜಾಯ್ ಮಾಡ್ತಿದ್ದಾರೆ ಆಲಿಯಾ ಹಾಗೂ ಸಿದ್ಧಾರ್ಥ್

ಸೀಕ್ರೆಟ್ ಆಗಿ ಹಾಲಿ ಡೇ ಎಂಜಾಯ್ ಮಾಡ್ತಿದ್ದಾರೆ ಆಲಿಯಾ ಹಾಗೂ ಸಿದ್ಧಾರ್ಥ್
, ಸೋಮವಾರ, 27 ಜೂನ್ 2016 (09:21 IST)
ಮೊನ್ನೆ ಮೊನ್ನೆ ತಾನೇ ಆಲಿಯಾ ಭಟ್ ಹಾಗೂ ಸಿದ್ದಾರ್ಥ್ ಪರಸ್ಪರ ದೂರವಾಗಿದ್ದಾರೆ ಅವರಿಬ್ಬರು ಒಬ್ಬರನ್ನೊಬ್ಬರು ನೋಡೋದಕ್ಕೂ ಇಷ್ಟಪಡುತ್ತಿಲ್ಲ ಅನ್ನೋ ಸುದ್ದಿ ಬಾಲಿವುಡ್ ಅಂಗಳ ದಲ್ಲಿ ಜೋರಾಗಿ ಕೇಳಿ ಬಂದಿತ್ತು. ಅಲ್ಲದೇ ಒಂದೇ ಸಿನಿಮಾದಲ್ಲಿ ಅಭಿನಯಿಸೋದಕ್ಕೂ ಅವರಿಬ್ಬರು ಹಿಂದೇಟು ಹಾಕುತ್ತಿದ್ದಾರೆ ಅಂತಾ ಹೇಳಲಾಗುತ್ತಿತ್ತು.ಆದ್ರೀಗ ಅದೆಲ್ಲಾ ಉಲ್ಟಾ ಆಗಿದೆ.
 
ಹೌದು... ಸಿದ್ಧಾರ್ಥ್ ಹಾಗೂ ಆಲಿಯಾ ಭಟ್ ಅವರು ಪರಸ್ಪರ ದೂರವಾಗಿದ್ದಾರೆ ಅಂತಾ ಸುಖಾಸುಮ್ಮನೆ ಸುದ್ದಿ ಹಬ್ಬಿಸಿದವರು ಇದೀಗ ಫುಲ್ ಶಾಕ್ ಆಗಿದ್ದಾರೆ. ಯಾಕಂದ್ರೆ ಸಿದ್ದಾರ್ಥ್ ಹಾಗೂ ಆಲಿಯಾ ಭಟ್ ಅವರು ಸದ್ಯ ತಮ್ಮ ಹಾಲಿಡೇಯನ್ನು ಜೊತೆಯಾಗಿ ಎಂಜಾಯ್ ಮಾಡುತ್ತಿದ್ದಾರೆ. ಲಂಡನ್ ನಲ್ಲಿ ಸಿಕ್ರೇಟ್ ಜಾಗವೊಂದರಲ್ಲಿ ಆಲಿಯಾ ಹಾಗೂ ಸಿದ್ಧಾರ್ಥ್ ಜೊತೆಯಾಗಿ ಸಮಯ ಕಳೆಯುತ್ತಿದ್ದಾರೆ. ಇಪ್ಟು ದಿನ ಆಲಿಯಾ ತಮ್ಮ ಉಡ್ತಾ ಪಂಜಾಬ್ ಸಿನಿಮಾದಲ್ಲಿ  ಬ್ಯೂಸಿಯಾಗಿದ್ದರು.ಆದ್ರೀಗ ಸಿನಿಮಾ ರಿಲೀಸ್ ಆಗಿರೋದರಿಂದ ಆಲಿಯಾ ಭಟ್ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ತಮ್ಮ ಹಾಲಿಡೇಯನ್ನು ಎಂಜಾಯ್ ಮಾಡುತ್ತಿದ್ದಾರೆ.
 
ಇನ್ನು ಆಲಿಯಾ ಹಾಗೂ ಸಿದ್ಧಾರ್ಥ್ ಇಬ್ಬರೂ ಕೂಡ ಕರಣ್ ಜೋಹರ್ ನಿರ್ದೇಶನದ  ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ರು. ಆ ಬಳಿಕ ಕಪೂರ್ ಆಂಡ್ ಸನ್ಸ್ ಸಿನಿಮಾದಲ್ಲಿಯೂ ಇದೆ ಜೋಡಿ ಜೊತೆಯಾಗಿ ಕಾಣಿಸಿಕೊಂಡಿತ್ತು. ತೆರೆ ಮೇಲೆ ಮಾತ್ರವಲ್ಲದೇ ನಾವು ರಿಯಲ್ ಲೈಫ್ ನಲ್ಲೂ ಸೂಪರ್ ಜೋಡಿಗಳು ಅನ್ನೋದನ್ನು ಆಲಿಯಾ ಹಾಗೂಸಿದ್ದಾರ್ಥ್ ತೋರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಫ್ ಗರ್ಲ್ ಫ್ರೆಂಡ್ ಚಿತ್ರೀಕರಣದ ಮೇಲೆ ಶ್ರದ್ಧಾ ಕಪೂರ್ ಕಾಲಿಗೆ ಗಾಯ