Select Your Language

Notifications

webdunia
webdunia
webdunia
webdunia

ಹಾಫ್ ಗರ್ಲ್ ಫ್ರೆಂಡ್ ಚಿತ್ರೀಕರಣದ ಮೇಲೆ ಶ್ರದ್ಧಾ ಕಪೂರ್ ಕಾಲಿಗೆ ಗಾಯ

ಹಾಫ್ ಗರ್ಲ್ ಫ್ರೆಂಡ್ ಚಿತ್ರೀಕರಣದ ಮೇಲೆ ಶ್ರದ್ಧಾ ಕಪೂರ್ ಕಾಲಿಗೆ ಗಾಯ
, ಸೋಮವಾರ, 27 ಜೂನ್ 2016 (09:19 IST)
ಬಾಲಿವುಡ್ ಕ್ಯೂಟ್ ಬೆಡಗಿ ಶ್ರದ್ಧಾ ಕಪೂರ್ ಅವರು ಸದ್ಯ ಫುಲ್ ಬ್ಯುಸಿಯಾಗಿದ್ದಾರೆ. ಒಂದು ಕಡೆ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಒಕೆ ಜಾನು ಸಿನಿಮಾದಲ್ಲಿ ಅಭಿನಯಿಸುತ್ತಿದ್ದರೆ, ಮತ್ತೊಂದು ಕಡೆ ಹಾಫ್ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಅರ್ಜುನ್ ಕಪೂರ್ ಅವರೊಂದಿಗೆ ಅಭಿನಯಿಸಿದ್ದಾರೆ. ಈ ಮಧ್ಯೆ ಶ್ರದ್ಧಾ ಕಪೂರ್ ಕಾಲಿಗೆ ಏಟು ಮಾಡಿಕೊಂಡಿದ್ದಾರೆ.

ಅಂದ್ಹಾಗೆ ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಅವರ  ಜನಪ್ರಿಯ ಕಾದಂಬರಿ ‘ಹಾಫ್ ಗರ್ಲ್’ಫ್ರೆಂಡ್’ ಬಾಲಿವುಡ್ ನಲ್ಲಿ ಸಿನಿಮಾ ಆಗುತ್ತಿದೆ. ಈ ಸಿನಿಮಾದಲ್ಲಿ ಅರ್ಜುನ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಾಯಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಸಿನಿಮಾದ ಶೂಟಿಂಗ್‌ಗಾಗಿ ಶ್ರದ್ಧಾ ಕಪೂರ್ ಅವರು ಮೊನ್ನ ಬಾಸ್ಕೆಟ್ ಬಾಲ್ ಆಡುತ್ತಿದ್ದರು. ಈ ವೇಳೆ ಶ್ರದ್ಧಾ ಕಪೂರ್ ಅರು ತಮ್ಮ ಕಾಲಿಗೆ ಏಟು ಮಾಡಿಕೊಂಡಿದ್ದಾರೆ. ಇನ್ನು ಕಾಲಿಗೆ ಏಟು ಮಾಡಿಕೊಂಡಿರುವ ಫೋಟೋವನ್ನು ಶ್ರದ್ಧಾ ಕಪೂರ್ ಅವರು ತಮ್ಮ ಇನ್ಸ್ ಟ್ರಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಕಾಲಿಗೆ ಗಾಯವಾಗಿದ್ದರೂ ಕೂಡ ನಾನು ಬಾಸ್ಕೆಟ್ ಬಾಲ್ ಮೈದಾನದಲ್ಲಿ ಓಡುವಾಗ ತುಂಬಾನೇ ಎಂಜಾಯ್ ಮಾಡಿದೆ ಅಂತಾ ಅವರು ಹೇಳಿದ್ದಾರೆ.
 
ಇನ್ನು ಈ ಸಿನಿಮಾದಲ್ಲಿ ಅರ್ಜುನ್ ಕಪೂರ್ ಅವರು ಅರ್ಜುನ್ ಬಾಸ್ಕೆಟ್ ಬಾಲ್ ಆಟಗಾರ ಮಾಧವ್ ಜಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.ಈ ಸಿನಿಮಾ ಬಿಹಾರಿ ಹುಡುಗನೊಬ್ಬ ತಾನು ಪ್ರೀತಿಸಿದ ಹುಡುಗಿಯ ಹುಡುಕಾಟಕ್ಕೆ ಸಂಬಂಧಿಸಿದ ಕಥೆಯನ್ನು ಒಳಗೊಂಡಿದೆ. ಮೊಹಿತ್ ಸೂರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಮುಂದಿನ ಅಂದ್ರೆ 2017 ಏಪ್ರೀಲ್ 28 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಬಿಗ್‌ಸ್ಕ್ರೀನ್ ಮೇಲೆ ಮೊಡಿ ಮಾಡಲಿರುವ ಅರ್ಜುನ್-ಪರಿಣಿತಿ?