Select Your Language

Notifications

webdunia
webdunia
webdunia
webdunia

ನಟ ಕುಣಾಲ್ ಖೇಮು ಬೈಕ್ ಓಡಿಸೋದು ಇಷ್ಟ ಎಂದು ಮಾಡಿಕೊಂಡ ಎಡವಟ್ಟಾದರೂ ಏನು…?

ನಟ ಕುಣಾಲ್ ಖೇಮು ಬೈಕ್ ಓಡಿಸೋದು ಇಷ್ಟ ಎಂದು ಮಾಡಿಕೊಂಡ ಎಡವಟ್ಟಾದರೂ ಏನು…?
ಮುಂಬೈ , ಶುಕ್ರವಾರ, 23 ಮಾರ್ಚ್ 2018 (06:53 IST)
ಮುಂಬೈ : ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ  ಎಂಬ ನಿಯಮವಿದ್ದರೂ ಕೂಡ ಬಾಲಿವುಡ್ ನಟ ಕುಣಾಲ್ ಖೇಮು ಅವರು ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿ ಸಂಚಾರಿ ನಿಯಮವನ್ನು  ಉಲ್ಲಂಘಿಸಿದ್ದಾರೆ  ಎಂದು ತಿಳಿದುಬಂದಿದೆ.


ಇವರು ಹೆಲ್ಮೆಟ್ ಧರಿಸದೆ ಟೋಪಿ ಹಾಕಿಕೊಂಡು ಬೈಕ್ ನಲ್ಲಿ ಸಂಚರಿಸುತ್ತಿರುವುದನ್ನು ನೋಡಿದ ಸಾರ್ಜಜನಿಕರು ಅವರ ಫೋಟೋ ತೆಗೆದು ಅದನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಇದನ್ನು ತಿಳಿದ ನಟ ಕುಣಾಲ್ ಖೇಮು ಅವರು ನಿಯಮ ಉಲ್ಲಂಘನೆ ಮಾಡಿದ್ದರಿಂದ ಮುಂಬೈ ಪೊಲೀಸರಲ್ಲಿ, ’ ನನಗೆ ಬೈಕ್ ಓಡಿಸೋದು ಇಷ್ಟ, ಆದರೆ  ಹೆಲ್ಮೆಟ್ ಧರಿಸದೇ ಇದ್ದಿದ್ದು ನನ್ನ ತಪ್ಪು. ಜನರಿಗೆ ತಪ್ಪು ಮಾದರಿಯಾಗಲು ತಾವು ಬಯಸುವುದಿಲ್ಲ ‘ ಎಂದು ಟ್ವೀಟ್ ಮಾಡುವುದರ ಮೂಲಕ ಕ್ಷಮೆ ಕೇಳಿದ್ದಾರೆ. ಆದರೆ ಇದಕ್ಕೆ ಪೊಲೀಸರು ನಿಮಗೆ ಬೈಕ್ ಇಷ್ಟ, ನಮಗೆ ಜನರ ಸುರಕ್ಷತೆ ಮುಖ್ಯ. 500 ರೂಪಾಯಿ ದಂಡ ಕಟ್ಟಿ, ಚಲನ್ ಕಳಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದಕ್ಕೆ ನಟ ಕುಣಾಲ್ ಖೇಮು ಅವರು ಕೂಡ ಒಪ್ಪಿಕೊಂಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟಿಬಿಯಿಂದ ನರಳುತ್ತಿದ್ದ ನಟಿ ಪೂಜಾ ದದ್ವಾಲ್ ಅವರಿಗೆ ಸಹಾಯ ಮಾಡಿದ ಆ ನಟ ಯಾರು ಗೊತ್ತಾ?