Select Your Language

Notifications

webdunia
webdunia
webdunia
webdunia

ಲಿಪ್ ಲಾಕ್ ದೃಶ್ಯದಲ್ಲಿ ನಟಿಸಲಾರದೆ ಸಿನಿಮಾದಿಂದ ಹೊರ ನಡೆದ ನಟಿ ತಾರಾ ಸುತಾರಿಯಾ!

ಲಿಪ್ ಲಾಕ್ ದೃಶ್ಯದಲ್ಲಿ ನಟಿಸಲಾರದೆ ಸಿನಿಮಾದಿಂದ ಹೊರ ನಡೆದ ನಟಿ ತಾರಾ ಸುತಾರಿಯಾ!
ಮುಂಬೈ , ಬುಧವಾರ, 12 ಸೆಪ್ಟಂಬರ್ 2018 (11:47 IST)
ಮುಂಬೈ : ತೆಲುಗಿನ 'ಅರ್ಜುನ್ ರೆಡ್ಡಿ' ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗುತ್ತಿದ್ದು, ಇದೀಗ ಈ ಚಿತ್ರದಲ್ಲಿ ನಟಿಸಲು ನಟಿ ತಾರಾ ಸುತಾರಿಯಾ ಹಿಂದೇಟು ಹಾಕಿದ್ದಾರಂತೆ.


ಹೌದು ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೆಟ್ ಮಾಡಿದ್ದ ವಿಜಯ್ ದೇವರಕೊಂಡ ನಟಿಸಿರುವ 'ಅರ್ಜುನ್ ರೆಡ್ಡಿ' ಸಿನಿಮಾ ಇದೀಗ ಹಿಂದಿಗೆ ರಿಮೇಕ್ ಆಗುತ್ತಿದೆ. ಸಿನಿಮಾ ಹಕ್ಕು ಈಗಾಗಲೇ ಹಿಂದಿಗೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದು, ಸಂದೀಪ್ ರೆಡ್ಡಿ ವೆಂಗ ಅವರೇ ಹಿಂದಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.


ಇದರಲ್ಲಿ ವಿಜಯ್ ದೇವರಕೊಂಡ ಮಾಡಿದ ಪಾತ್ರವನ್ನು ಶಾಹಿದ್ ಕಪೂರ್ ಮಾಡುತ್ತಿದ್ದು, ನಾಯಕಿಯಾಗಿ ನಟಿ ತಾರಾ ಸುತಾರಿಯಾ ನಟಿಸುತ್ತಾರೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಈಗ ತಾರಾ ಈ ಪ್ರಾಜೆಕ್ಟ್​​​ನಿಂದ ಹೊರಬಂದಿದ್ದಾರೆಯಂತೆ . ಕಾರಣ ಈ ಚಿತ್ರದಲ್ಲಿ ಬರುವ  ಲಿಪ್​ಲಾಕ್ ದೃಶ್ಯ. ಲಿಪ್ ಲಾಕ್ ದೃಶ್ಯ ಗಳಲ್ಲಿ ತಾರಾಗೆ ನಟಿಸಲು ಆಸಕ್ತಿಯಿಲ್ಲದ್ದರಿಂದ ಚಿತ್ರದಿಂದ ಹೊರ ಉಳಿದಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಕರ್ತರ ಮೇಲೆ ಹರಿಹಾಯ್ದ ದೀಪಿಕಾ ಪಡುಕೋಣೆ; ಕಾರಣವೇನು ಗೊತ್ತಾ?