Select Your Language

Notifications

webdunia
webdunia
webdunia
webdunia

ಏಳು ವರ್ಷದ ಹಿಂದೆ ನಾಪತ್ತೆಯಾದ ಬಾಲಕನನ್ನು ಹುಡುಕಿಕೊಟ್ಟ ಫೇಸ್ ಬುಕ್!

ಏಳು ವರ್ಷದ ಹಿಂದೆ ನಾಪತ್ತೆಯಾದ ಬಾಲಕನನ್ನು ಹುಡುಕಿಕೊಟ್ಟ ಫೇಸ್ ಬುಕ್!
ಮುಂಬೈ , ಬುಧವಾರ, 12 ಸೆಪ್ಟಂಬರ್ 2018 (11:44 IST)
ಮುಂಬೈ : ಹೈದರಾಬಾದ್‌ನಲ್ಲಿ 2011ರಲ್ಲಿ ನಾಪತ್ತೆಯಾಗಿದ್ದ 15ವರ್ಷದ ಬಾಲಕ ಮತ್ತೆ ತನ್ನ ಮನೆಯವರನ್ನು ಮುಂಬೈನಲ್ಲಿ ಏಳು ವರ್ಷ ಬಳಿಕ ಸೇರಲು ಸಾಮಾಜಿಕ ಜಾಲತಾಣಗಳಲ್ಲೊಂದಾದ ಫೇಸ್ ಬುಕ್ ಕಾರಣವಾಗಿದೆ.


ಸುಜೀತ್ ಕುಮಾರ್ ಝಾ (23) ಎಂಬ ಯುವಕನನ್ನು ಮುಂಬೈನಲ್ಲಿ  ಪೊಲೀಸರು ಪತ್ತೆ ಮಾಡಿದ್ದು ಮಗನನ್ನು ಕಂಡು ಕುಟುಂಬದ ಸಂಭ್ರಮ ಮುಗಿಲು ಮುಟ್ಟಿದೆ. ಹೈದರಾಬಾದ್‌ನ ಮೌಲಾ ಅಲಿ ಪ್ರದೇಶದಲ್ಲಿರುವ ತಮ್ಮ ನಿವಾಸದಿಂದ 15 ವರ್ಷದ ಮಗ ನಾಪತ್ತೆಯಾದಾಗ ಆತನ ಸಹೋದರಿ ಮತ್ತು ಭಾವ ದೂರು ನೀಡಿದ್ದರು. ಆದರೆ ಬಾಲಕ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು 2011ರ ಅಕ್ಟೋಬರ್‌ನಲ್ಲಿ ಅಂತಿಮ ವರದಿ ಸಲ್ಲಿಸಿದರು.


ಆದರೆ ಇದೀಗ ಫೇಸ್‌ಬುಕ್‌ನಲ್ಲಿ ಈತನನ್ನು ಪತ್ತೆ ಮಾಡಿದ ಸುಜೀತ್‌ನ ಭಾವ, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರು. ಆದರೆ ಆತ ಇದನ್ನು ಸ್ವೀಕರಿಸಲಿಲ್ಲ. ಬಳಿಕ ಬೇರೆ ಹೆಸರಿನಿಂದ ತನ್ನ ಪ್ರೊಫೈಲ್ ಬದಲಿಸಿದ. ಆಗ ಅವರು ಈ ಬಗ್ಗೆ ಮಲ್ಕಜ್‌ಗಿರಿ ಪೊಲೀಸರಿಗೆ ದೂರು ನೀಡಿ, ಸಾಮಾಜಿಕ ಜಾಲತಾಣದಲ್ಲಿ ಇರುವ ಈತನನ್ನು ಪತ್ತೆ ಮಾಡಿಕೊಡುವಂತೆ ಕೋರಿದ್ದರು. ಮಾಹಿತಿ ಆಧಾರದಲ್ಲಿ ಸೈಬರ್ ಅಪರಾಧ ವಿಭಾಗದ ಪೊಲೀಸರು ಆತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುತ್ತೇವೆ: ರಮೇಶ್ ಜಾರಕಿಹೊಳಿ