Select Your Language

Notifications

webdunia
webdunia
webdunia
webdunia

ಮತ್ತೊಬ್ಬ ಸ್ಟಾರ್ ನಟನ ಜೊತೆ ನಟಿಸುವ ಅವಕಾಶಗಿಟ್ಟಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

ಮತ್ತೊಬ್ಬ ಸ್ಟಾರ್ ನಟನ  ಜೊತೆ ನಟಿಸುವ ಅವಕಾಶಗಿಟ್ಟಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ
ಬೆಂಗಳೂರು , ಭಾನುವಾರ, 9 ಸೆಪ್ಟಂಬರ್ 2018 (11:36 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಇದೀಗ ಮತ್ತೊಬ್ಬ ಟಾಲಿವುಡ್ ನ  ಸ್ಟಾರ್ ನಟರೊಬ್ಬರ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಕನ್ನಡದ ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು. ಅವರ ಅಭಿನಯ ಕಂಡು ಟಾಲಿವುಡ್ ನಿಂದ ಆಫರ್ ಗಳ ಸುರಿಮಳೆಯೇ ಹರಿದುಬಂದಿದೆ.

 

ಈಗಾಗಲೇ ವಿಜಯ ದೇವರಕೊಂಡ ಸೇರಿದಂತೆ, ಅಕ್ಕಿನೇನಿ ನಾಗಾರ್ಜನ್ ಹಾಗೂ ನಾನಿ ಜೊತೆ ರಶ್ಮಿಕಾ ಅಭಿನಯ ಮಾಡಿದ್ದಾರೆ. ಇದೀಗ ಟಾಲಿವುಡ್ ಸ್ಟಾರ್ ಜ್ಯೂನಿಯರ್ ಎನ್ ಟಿ ಆರ್ ಅಭಿನಯದ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯ ಮಾಡುತ್ತಾರಂತೆ. ಈಗಾಗಲೇ ಸಿನಿಮಾ ನಿರ್ಮಾಪಕರು ಒಂದು ಸುತ್ತಿನ ಮಾತುಕಥೆ ನಡೆಸಿದ್ದು ಫೈನಲ್ ಆಗುವುದಷ್ಟೇ ಬಾಕಿ ಇದೆಯಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಲಿಯೋನಾ ಹಾಗೂ ಪತಿ ಡೇನಿಯಲ್ ವೇಬರ್ ದಾಂಪತ್ಯ ಜೀವನದ ಗುಟ್ಟೇನು ಗೊತ್ತಾ?