Select Your Language

Notifications

webdunia
webdunia
webdunia
webdunia

ಕನ್ನಡದ 'ತಿಥಿ' ಸಿನಿಮಾ ವೀಕ್ಷಿಸಿದ ಅಮಿರ್, ಮರೆಯಲಾಗದ ಚಿತ್ರ ಎಂದ ಮಿಸ್ಟರ್ ಪರ್ಫೆಕ್ಷನಿಸ್ಟ್

ಕನ್ನಡದ 'ತಿಥಿ' ಸಿನಿಮಾ ವೀಕ್ಷಿಸಿದ ಅಮಿರ್, ಮರೆಯಲಾಗದ ಚಿತ್ರ ಎಂದ ಮಿಸ್ಟರ್ ಪರ್ಫೆಕ್ಷನಿಸ್ಟ್
ಮುಂಬೈ , ಸೋಮವಾರ, 30 ಮೇ 2016 (18:58 IST)
ಬಾಲಿವುಡ್ ನಟ ಅಮಿರ್ ಖಾನ್ ನ್ಯಾಷನಲ್ ಅವಾರ್ಡ್ ಪಡೆದುಕೊಂಡ ಕನ್ನಡದ ತಿಥಿ ಚಿತ್ರವನ್ನು ವೀಕ್ಷಿಸಿದ್ದಾರೆ. ಈಗಾಗ್ಲೇ ಕನ್ನಡದ ತಿಥಿ ಸಿನಿಮಾ ಸಾಕಷ್ಟು ಚರ್ಚೆಯಾಗುತ್ತಿದೆ. 


ರಾಮರೆಡ್ಡಿ ನಿರ್ದೇಶನದ ತಿಥಿ ಸಿನಿಮಾದ ಬಗ್ಗೆ ಹಲವು ಪ್ರಶಂಸೆಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟ ಅಮಿರ್ ಖಾನ್ ತಿಥಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದಾರೆ. 
 
ಮುಂಬೈನ ಚಿತ್ರಮಂದಿರದಲ್ಲಿ ತಿಥಿ ಸಿನಿಮಾ ವೀಕ್ಷಿಸಿದ ಅಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ,  ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಿಥಿ ಒಂದು ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ಹೊಗಳಿದ್ದಾರೆ. ಅಲ್ಲದೇ ಈ ಚಿತ್ರದ ಬಗ್ಗೆ ವಿವರಿಸಿ ಕೂಡ ಹೇಳಿದ್ದಾರೆ ಅಮಿರ್ ಖಾನ್..
 
ತಿಥಿ ಸಿನಿಮಾದ ಪ್ರತಿಯೊಬ್ಬ ಕಲಾವಿದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರು ಅಮಿರ್, ಸಹಜವಾಗಿ ಹಾಗೂ ಅದ್ಭೂತವಾಗಿ ಚಿತ್ರ ಮೂಡಿ ಬಂದಿದೆ ಎಂದರಲ್ಲದೇ, 'ಇದೊಂದು ಮರೆಯಲಾಗದ ಚಿತ್ರ, ಕನ್ನಡದ ತಿಥಿ ಸಿನಿಮಾ ಬೆಸ್ಟ್ ಚಿತ್ರ'.. ನ್ಯಾಷನಲ್ ಅವಾರ್ಡ ಸ್ವೀಕರಿಸಿದ್ದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್‌ಸ್ಟಾಗ್ರಾಮ್‌ನಲ್ಲಿ ಹಳೆ ಫೊಟೋಗಳನ್ನು ಶೇರ್ ಮಾಡಿದ ಪ್ರಿಯಾಂಕಾ ಛೋಪ್ರಾ