Select Your Language

Notifications

webdunia
webdunia
webdunia
webdunia

ಮಕರ ಸಂಕ್ರಾಂತಿ ವಿಶೇಷ: ಇಂದು ಈ ಕೆಲಸ ಮಾಡಿದರೆ ಜನ್ಮ ಜನ್ಮಕ್ಕಾಗುವಷ್ಟು ಪುಣ್ಯ ಪ್ರಾಪ್ತಿ!

ಮಕರ ಸಂಕ್ರಾಂತಿ ವಿಶೇಷ: ಇಂದು ಈ ಕೆಲಸ ಮಾಡಿದರೆ ಜನ್ಮ ಜನ್ಮಕ್ಕಾಗುವಷ್ಟು ಪುಣ್ಯ ಪ್ರಾಪ್ತಿ!
ಬೆಂಗಳೂರು , ಸೋಮವಾರ, 14 ಜನವರಿ 2019 (09:02 IST)
ಬೆಂಗಳೂರು: ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ಸಾಯುವುದಕ್ಕೂ ಇದು ಪುಣ್ಯ ಕಾಲವಾಗಿದೆ.


ಅದಕ್ಕಾಗಿಯೇ ಉತ್ತರಾಯಣ ದೇವತೆಗಳ ಕಾಲ, ದಕ್ಷಿಣಾಯಣ ಪಿತೃಗಳ ಕಾಲವೆಂದು ಕರೆಯಲಾಗುತ್ತದೆ. ಸಕಲ ಶುಭ ಕಾರ್ಯಗಳಿಗೆ ಉತ್ತರಾಯಣ ಕಾಲ ಸೂಕ್ತ ಎನ್ನಲಾಗುತ್ತದೆ.

ಇದನ್ನು ಪುಣ್ಯ ಕಾಲ ಎಂದು ಕರೆಯಲಾಗಿದ್ದು, ಇನ್ನು ಈ ಕಾಲದಲ್ಲಿ ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಈ ರೀತಿ ಮಾಡಿದ ದಾನಗಳು ಜನ್ಮ ಜನ್ಮದಲ್ಲೂ ನಮಗೆ ಸಿಗುವಂತೆ ಸೂರ್ಯ ದೇವನು ಅನುಗ್ರಹಿಸುತ್ತಾನಂತೆ.

ಇದಕ್ಕಾಗಿಯೇ ಇಂದು ಎಳ್ಳು ಬೆಲ್ಲ ಹಂಚಲಾಗುತ್ತದೆ. ಅಷ್ಟೇ ಅಲ್ಲ, ಇಂದು ದಕ್ಷಿಣಾಯನದಲ್ಲಿ ಮುಚ್ಚಿದ್ದ ಸ್ವರ್ಗದ ಬಾಗಿಲು ತೆರೆಯುವ ದಿನ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ನಮ್ಮ ಮನೆಯಂಗಳಕ್ಕೆ ಬರುತ್ತಾರೆಂಬ ನಂಬಿಕೆಯಿದೆ. ಹೀಗಾಗಿ ಇಂದು ಪುಣ್ಯ ನದಿ ಸ್ನಾನ, ಪಿತೃ ತರ್ಪಣ, ದಾನ ಮಾಡುವುದಕ್ಕೆ ಪ್ರಶಸ್ತ ದಿನ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?