ಅತಿಥಿಗಳನ್ನು ಆದರಿಸುವ ಮನೆಯ ಮುಖ್ಯದ್ವಾರ.....

Webdunia
ಬುಧವಾರ, 30 ಸೆಪ್ಟಂಬರ್ 2015 (19:26 IST)
ಸಾರ ಕಲ್ಲಕಟ್ಟ
 
ಮನೆಯ ಮುಖ್ಯದ್ವಾರವು ಮನೆಗೆ ಅತಿಥಿಗಳನ್ನು ಆದರದಿಂದ ಬರಮಾಡಿಕೊಳ್ಳುವ ಪ್ರತೀಕವಾದುದರಿಂದ ಮನೆಯ ಮುಖ್ಯದ್ವಾರಕ್ಕೆ ವಾಸ್ತುಶಾಸ್ತ್ರದಲ್ಲಿ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ.ಮುಖ್ಯದ್ವಾರವು ಯಾವ ದಿಕ್ಕಿನಲ್ಲಿರಬೇಕು? ಬಾಗಿಲು ನಿರ್ಮಿಸಲು ಯಾವ ಮರವನ್ನು ಆಯ್ಕೆ ಮಾಡಬೇಕು? ಮನೆಯ ಮುಂದಿನ ಗೇಟು ಯಾವ ರೀತಿ ಇರಿಸಬೇಕು?ಎಂಬುದನ್ನು ಶಾಸ್ತ್ರೀಯ ರೀತಿಯಲ್ಲಿ ವಾಸ್ತುಶಾಸ್ತ್ರವು ವಿವರಿಸುತ್ತದೆ.
 
ಮನೆಯ ಬಾಗಿಲು ತೆರೆದು ಪ್ರಸನ್ನವದನರರಾಗಿ ಅತಿಥಿಗಳನ್ನು ಬರಮಾಡಿಕೊಳ್ಳುವ ರೀತಿಯು ಅತಿಥಿಗಳ ಮನದಣಿಯುವಂತಿದ್ದರೆ ಮುಖ್ಯದ್ವಾರಕ್ಕೆ ಅಲಂಕಾರಗಳು ಯಾಕೆ ಬೇಕು ಹೇಳಿ? ಆದರೂ ಮುಖ್ಯದ್ವಾರವನ್ನು ಆದಷ್ಟು ಶೃಂಗರಿಸಲು ಪ್ರತಿಯೊಬ್ಬರೂ ಶ್ರಮಿಸುತ್ತಾರೆ ಯಾಕೆಂದರೆ ಮುಖ್ಯದ್ವಾರವು ಪ್ರತೀಮನೆಯ ಆಕರ್ಷಣಾ ಬಿಂದು ಆದುದರಿಂದಲೇ ಪ್ರತಿಯೊಬ್ಬರೂ ಅದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲು ಬಯಸುತ್ತಾರೆ.ಮನೆಯ ಪ್ರಮುಖ ದ್ವಾರವನ್ನು ಶೃಂಗರಿಸುವುದು ಐಶ್ವ್ಯರ್ಯದ ಸಂಕೇತ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.ಮುಖ್ಯದ್ವಾರದ ಬಾಗಿಲುಗಳಲ್ಲಿ ಲಕ್ಷ್ಮಿ,ಸರಸ್ವತಿ,ಗಜಲಕ್ಷ್ಮಿ ಮೊದಲಾದ ಕೆತ್ತನೆಗಳಿದ್ದರೆ ಉತ್ತಮ, ಜೊತೆಗೆ ಇವು ಬಾಗಿಲಿನ ಸೌಂದರ್ಯವನ್ನು ವರ್ಧಿಸುತ್ತವೆ.
 
ಮನೆಯ ಮಧ್ಯಭಾಗದಲ್ಲಿ ಬರುವಂತೆ ಮುಖ್ಯದ್ವಾರ ನಿರ್ಮಿಸಿದರೆ ಉತ್ತಮ.ಈ ಬಾಗಿಲಿನ ನೇರ ರೇಖೆಯಲ್ಲಿ ಇನ್ನ್ಯಾವುದೇ ಬಾಗಿಲುಗಳು ಇರಬಾರದು.ಮುಖ್ಯದ್ವಾರದ ನೇರವಾಗಿ ಮನೆಯ ಗೇಟನ್ನು ಇರಿಸಬಾರದು.ಈ ಬಾಗಿಲಿನ ನೇರ ಮುಂಭಾಗದಲ್ಲಿ ಯಾವುದೇ ಕಂಬಗಳು ಅಥವಾ ಯಾವುದೇ ಮನೆಗಳೋ ಇರಬಾರದು.ಒಂದು ವೇಳೆ ನಿಮ್ಮ ಮನೆಯ ನೇರ ಮುಂಭಾ-ಗದಲ್ಲಿ ಇನ್ನೊಂದು ಮನೆಯಿದ್ದರೆ ಆ ಮನೆಯ ಬಾಗಿಲಿನ ನೇರವಾಗಿ ನಿಮ್ಮ ಮನೆಯ ಬಾಗಿಲು ಇರದಂತೆ ಶ್ರದ್ಧೆವಹಿಸಿ.

ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ..ಮಾಹಿತಿ ಇಲ್ಲಿದೆ

ನೀರನ್ನು ಈ ರೀತಿ ಮಾಡಿದ್ರೆ ದೋಷ ತಟ್ಟುತ್ತದೆಯಂತೆ

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ದುರಾದೃಷ್ಟ ದೂರವಾಗಿ ಅದೃಷ್ಟ ನಿಮ್ಮದಾಗುತ್ತದೆ

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

ಆಸ್ಟ್ರೇಲಿಯಾದಲ್ಲಿ ಅಭ್ಯಾಸದ ನಡುವೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭಿಮಾನಿಗಳ ಕಾಟ

ಮನಿಷ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಪ್ರೊಡ್ಯೂಸರ್

ನಯನತಾರ ಇನ್ನುಮುಂದೆ ಹೈದರಾಬಾದ್ ನಲ್ಲಿ ವಾಸ ?

ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದರೆ ಶುಭ-ಅಶುಭ ಎಂಬುದು ತಿಳಿಬೇಕಾ

ಇಂದಿನ ರಾಶಿ ಭವಿಷ್ಯ