ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಸಹೋದರರ ಬಾಂಬ್!

Webdunia
ಮಂಗಳವಾರ, 11 ಸೆಪ್ಟಂಬರ್ 2018 (08:59 IST)
ಬೆಂಗಳೂರು: ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಬೆಳಗಾವಿ ಕಾಂಗ್ರೆಸ್ ನ ಘಟಾನುಘಟಿ ನಾಯಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಗುದ್ದಾಟ ಇನ್ನೊಂದು ಮಟ್ಟಕ್ಕೆ ಸಾಗಿದೆ.

ಇದೀಗ ಜಾರಕಿಹೊಳಿ ಸಹೋದರರ ಬಂಡಾಯ ಸಮ್ಮಿಶ್ರ ಸರ್ಕಾರಕ್ಕೇ ಕಂಟಕವಾಗುವ ಲಕ್ಷಣ ಕಾಣುತ್ತಿದೆ. ಇದರ ಹಿಂದೆ ಬಿಜೆಪಿ ನಾಯಕರಾದ ಬಿ ಶ್ರೀರಾಮುಲು ಮತ್ತು ರೇಣುಕಾಚಾರ್ಯ ಕೈವಾಡವೂ ಇದೆ ಎನ್ನುವುದು ಕಾಂಗ್ರೆಸ್ ವಲಯದ ಆರೋಪ.

ಈಗಾಗಲೇ ಬಿಜೆಪಿಯಲ್ಲಿರುವ ಬಾಲಚಂದ್ರ ಜಾರಕಿಹೊಳಿ ಮೂಲಕ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನೂ ಬಿಜೆಪಿಗೆ ಸೆಳೆಯಲು ತೆರೆಮರೆಯ ಯತ್ನ ಸಾಗಿದೆ. ಇವರ ಮೂಲಕ ಮತ್ತಷ್ಟು ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆದು ಆಪರೇಷನ್ ಕಮಲ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆದಿದೆ. ಆದರೂ ವಿದೇಶ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಹಿಂತಿರುಗವರೆಗೆ ಕಾಯಲು ಜಾರಕಿಹೊಳಿ ಸಹೋದರರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅಂತೂ ಇದೀಗ ಹೊಸದೊಂದು ತಲೆನೋವು ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಶತ್ರುಘ್ನಾ ಸಿನ್ಹಾ ಬಾಂಬ್!

ಸಿಎಂ ಆಗುವ ಬಯಕೆ ಡಿಸಿಎಂ ಪರಮೇಶ್ವರ್ ಗೆ: ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?!

ಏರಿ ಇಂಡಿಯಾ ಆರ್ಥಿಕ ಹೊರೆ ತಗ್ಗಿಸಲು ಮಿತವ್ಯಯ ಕ್ರಮ

ನಿಮ್ಮ ದೇಹದಲ್ಲಿ ಈ ಬದಲಾವಣೆ ಆಗುತ್ತಿದ್ದರೆ ಹುಷಾರಾಗಿ!

ಅಂಜಾನ್ ಹೀರೋ ಸೂರ್ಯ ಈಗ ಮಾಸ್ಗ ಗೆ ಓಕೆ ಅಂದಿದ್ದಾರಂತೆ.. ಏನು ಹಾಗೆಂದರೆ ಅಂದ್ರೆ?!

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಸಂದಿವಾತ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಸೂಕ್ತವಾದ ಘಟಕಗಳ ಕೊರತೆ : ಡಾ.ದೇಬಾಸಿಸ್ ದಂಡ

ಕುಡಿಯುವ ನೀರಿನ ಕಾಮಗಾರಿ ಬೇಗ ಪೂರ್ಣಗೊಳಿಸಿ ಎಂದ ಕಾರ್ಯದರ್ಶಿ

ಮುಂದಿನ ಸುದ್ದಿ