ಮತ್ತೊಮ್ಮೆ ಮಿಂಚಿದ ಮ್ಯಾಕ್ಸ್‌ವೆಲ್: ರಾಜಸ್ಥಾನ ವಿರುದ್ಧ ಕಿಂಗ್ಸ್ ಇಲೆವೆನ್ ಜಯ

Webdunia
ಸೋಮವಾರ, 21 ಏಪ್ರಿಲ್ 2014 (12:26 IST)
ಶಾರ್ಜಾ:ಎರಡು ದಿನಗಳ ಅಂತರದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಬೃಹತ್ ಮೊತ್ತಗಳನ್ನು ಸುಲಭವಾಗಿ ಮುಟ್ಟಿದೆ.  ಕಿಂಗ್ಸ್‌ಇಲೆವನ್ ಪಂಜಾಬ್ ಆಪದ್ಬಾಂಧವ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ತಮ್ಮ ಮಿಂಚಿನ ದಾಳಿ ಮೂಲಕ ಎದುರಾಳಿ ತಂಡವನ್ನು ಕಂಗೆಡಿಸಿದರು. ಎರಡೂ ಸಂದರ್ಭಗಳಲ್ಲಿ ಕಿಂಗ್ಸ್ ಇಲೆವನ್ ಬೌಲರ್‌ಗಳು ಎದುರಾಳಿ ತಂಡಕ್ಕೆ ನಿರಾಯಾಸವಾಗಿ ರನ್ ಗಳಿಸಲು ಅವಕಾಶ ಕೊಟ್ಟರು.
 
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡೇವಿಡ್ ಮಿಲ್ಲರ್ 206 ಬೆನ್ನಟ್ಟಿದರು. ಭಾನುವಾರ ರಾತ್ರಿ ಇವರಿಬ್ಬರು ಇದೇ ರೀತಿಯ ಇನ್ನಿಂಗ್ಸ್ ಆಡಿ ಇನ್ನೊಂದು ದೊಡ್ಡ ಜಯವನ್ನು ತಂದಿತ್ತರು. ಮ್ಯಾಕ್ಸ್‌ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದಾಗ 10 ರನ್ ಕಳೆದುಕೊಂಡು ಎರಡು ವಿಕೆಟ್ ಬಿದ್ದಿತ್ತು.
ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ಗೆ ಇಳಿದ ಕೂಡಲೇ ಶಾಟ್‌ಗಳನ್ನು ಹೊಡೆಯಲಾರಂಭಿಸಿದರು. ಅವರು ಔಟಾಗುವಷ್ಟರಲ್ಲಿ 45 ಎಸೆತಗಳಲ್ಲಿ 89 ರನ್ ಬಾರಿಸಿದರು. ಅವರ ಸ್ಕೋರಿನಲ್ಲಿ 8 ಬೌಂಡರಿಗಳು ಮತ್ತು 6 ಸಿಕ್ಸರುಗಳಿದ್ದವು. 
 
 ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಮಿಲ್ಲರ್ ಎರಡನೇ ಅತೀ ವೇಗದ ಐಪಿಎಲ್ ಅರ್ಧಶತಕವನ್ನು ಬಾರಿಸಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಜಯಗಳಿಸುವುದಕ್ಕೆ ನೆರವಾದರು. 19ನೇ ಓವರಿನಲ್ಲಿ ಫಾಕನರ್ ಬೌಲಿಂಗ್‌ನಲ್ಲಿ ಅವರ ಸಿಕ್ಸರ್ 19 ಎಸೆತಗಳಲ್ಲಿ ಅವರ ಅರ್ಧಶತಕವನ್ನು ತಂದುಕೊಟ್ಟಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ಪರ ಅಭಿಷೇಕ್ ನಾಯರ್ 23 ರನ್ ಮತ್ತು ಸಂಜು ಸ್ಯಾಮ್ಸನ್ 52ರನ್ ಶೇನ್ ವ್ಯಾಟ್ಸನ್  50 ರನ್ ಬಾರಿಸಿ 191 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು.

ಕಿಂಗ್ಸ್ ಇಲೆವನ್ ಪಂಜಾಬ್ ಪರ ವೀರೇಂದ್ರ ಸೆಹ್ವಾಗ್ ಬೇಗನೇ ಔಟಾದರೂ ಪೂಜಾರಾ 40 ರನ್ ಸೇರಿಸಿದರು.ಮ್ಯಾಕ್ಸ್‌ವೆಲ್ ಮತ್ತೆ ಬಿಡುಬೀಸಿನ ಆಟವಾಡಿ 89 ರನ್ ಬಾರಿಸಿದರು. ನಂತರ ಮಿಲ್ಲರ್ 51 ರನ್ ಹೊಡೆದು ಗುರಿಯನ್ನು ಮುಟ್ಟಿದರು.

ನೀನೇ ಮುಂದೆ ನಡೆ ಎಂದು ಅಜಿಂಕ್ಯಾ ರೆಹಾನೆಗೆ ಸ್ಥಾನ ಬಿಟ್ಟುಕೊಟ್ಟ ವಿರಾಟ್ ಕೊಹ್ಲಿ

ಐಪಿಎಲ್: ಸಾಲು ಸೋಲಿನಿಂದ ಕಂಗೆಟ್ಟ ಆರ್ ಸಿಬಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?

ಇಂದಿನ ಗೆಲುವಿಗಿಂತ ದೊಡ್ಡದಲ್ಲ ನನ್ನ ಶತಕ: ಕೆಎಲ್ ರಾಹುಲ್

ಭ್ರಷ್ಟಾಚಾರ ಮರೆಮಾಚಲು ಸಿಬಿಐಗೆ ನೋ ಎಂಟ್ರಿ ಎಂದಿದ್ದೀರಾ? ಆಂಧ್ರ, ಪ.ಬಂಗಾಲ ಸಿಎಂಗೆ ಅರುಣ್ ಜೇಟ್ಲಿ ಲೇವಡಿ

ಸಕ್ಕರೆ ಖಾಯಿಲೆ ಇದ್ದವರು ಈರುಳ್ಳಿ ಸೇವಿಸಲೇಬೇಕು! ಕಾರಣವೇನು ಗೊತ್ತಾ?

ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ