ವಿಮಾನದಲ್ಲಿ ಬಟ್ಟೆಯನ್ನೆಲ್ಲಾ ಬಿಚ್ಚಿಬಿಸಾಕಿ ಮಹಿಳಾ ಸಿಬ್ಬಂದಿಗಳನ್ನು ತಬ್ಬಿಕೊಂಡ ಪ್ರಯಾಣಿಕ

Webdunia
ಶನಿವಾರ, 1 ಸೆಪ್ಟಂಬರ್ 2018 (11:38 IST)
ಮಲೇಷಿಯಾ : ಮಲೇಷಿಯಾದಿಂದ ಹೊರಟ ವಿಮಾನವೊಂದರಲ್ಲಿ ಬಾಂಗ್ಲಾದೇಶದ ಪ್ರಯಾಣಿಕನೊಬ್ಬ ನಗ್ನವಾಗಿ ಪ್ರಯಾಣಿಸಿದ್ದಲ್ಲದೇ, ವಿಮಾನದಲ್ಲಿರುವ  ಸ್ತ್ರೀ ಸಿಬ್ಬಂದಿಗಳನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ ಹಿನ್ನಲೆಯಲ್ಲಿ  ಆತನನ್ನು ಬಂಧಿಸಿರುವ ಘಟನೆ ವರದಿಯಾಗಿದೆ.


ಮಲಿಂಡೋ ಏರ್ ವಿಮಾನ ಶನಿವಾರ ಕೌಲಾಲಂಪುರ್ ನಿಂದ ಹೊರಟಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಬಾಂಗ್ಲಾದೇಶದ 20 ವರ್ಷ ವಯಸ್ಸಿನ ಯುವಕನೊಬ್ಬ  ತಾನು ಧರಿಸಿದ ಬಟ್ಟೆಗಳನೆಲ್ಲಾ ತೆಗೆದು ಹಿಂದಕ್ಕೆ ಎಸೆದು ನಗ್ನವಾಗಿ ಕುಳಿತುಕೊಂಡಿದ್ದಾನೆ. ಅಷ್ಟೇ ಅಲ್ಲದೇ ತನ್ನ ಲ್ಯಾಪ್ಟಾಪ್ನಲ್ಲಿ ಅಶ್ಲೀಲವಾದ ವಿಡಿಯೋಗಳನ್ನು ನೋಡಲು ಪ್ರಾರಂಭಿಸಿದ್ದಾನೆ.


ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿಗಳು ಅದನ್ನು ಪ್ರಶ್ನಿಸಿದಾಗ ಸ್ತ್ರೀ ಸಿಬ್ಬಂದಿಗಳನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ವ್ಯವಸ್ಥಾಪಕರು ಆತನನ್ನು ತಡೆದಾಗ ಅವರ ಮೇಲೆ ಆಕ್ರಮಣ ಮಾಡಲು ಮುಂದಾಗಿದ್ದಾನೆ. ನಂತರ ಸಿಬ್ಬಂದಿಗಳು ಹಾಗೂ ಸಹ ಪ್ರಯಾಣಿಕರು ಸೇರಿ ಆತನನ್ನು ಹಿಡಿದು ಆತನ ಕೈಗಳನ್ನು ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಮಹಿಳೆಗೆ ಆಪರೇಷನ್ ಮಾಡುವ ಬದಲು ವೈದ್ಯರು ಮಾಡಿದ್ದೇನು ಗೊತ್ತಾ?

ಪ್ರಿಯಕರನ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ನಟಿ ನಿಳನಿ

ರಫೇಲ್ ಡೀಲ್ ಬಗ್ಗೆ ಸಿದ್ದರಾಮಯ್ಯ ಕೇಂದ್ರವನ್ನು ಟೀಕಿಸಿದ್ದು ಹೀಗೆ!

ಹಾಸ್ಯ ನಟ ಸಾಧು ಕೋಕಿಲಾರವರ ತಾಯಿ ನಿಧನ

ಗರ್ಭನಿರೋಧಕ ಮಾತ್ರೆ ಬಳಸುತ್ತಿದ್ದೀರಾ? ಹಾಗಿದ್ದರೆ ಹುಷಾರ್!

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಎಷ್ಟು ದೇವಸ್ಥಾನ ಸುತ್ತಿದ್ರೂ ಅವರಲ್ಲಿರುವ ಕೆಟ್ಟ ಮನಸ್ಸು ಕಾಣೆಯಾಗಿಲ್ವಲ್ಲ? ಸಿಎಂ ಎಚ್ ಡಿಕೆಗೆ ಅರವಿಂದ ಲಿಂಬಾವಳಿ ಟಾಂಗ್

ಬಿಜೆಪಿ ನಾಯಕರಿಂದ ಕೇಂದ್ರ ಸರ್ಕಾರದ ಅಧಿಕಾರ ದುರ್ಬಳಕೆ- ದಿನೇಶ್ ಗುಂಡೂರಾವ್

ಮುಂದಿನ ಸುದ್ದಿ