ಕಂಪ್ಯೂಟರ್ ಬಳಸುವವರಿಗೆ ಕಣ್ಣಿನ ಆರೋಗ್ಯಕ್ಕಾಗಿ ಕೆಲವು ಟಿಪ್ಸ್...

Webdunia
ಮಂಗಳವಾರ, 19 ಜೂನ್ 2018 (15:32 IST)
ಇಂದಿನ ಪ್ರಪಂಚದಲ್ಲಿ ಕಂಪ್ಯೂಟರ್ ಇಲ್ಲದೇ ಯಾವುದೇ ಕೆಲಸ ಕಾರ್ಯಗಳು ಮುಂದೆ ಸಾಗುವುದಿಲ್ಲ ಎನ್ನುವಂತಾಗಿದೆ. ಹೀಗಿರುವಾಗ ಕಂಪ್ಯೂಟರ್ ಉದ್ಯೋಗಿಗಳಲ್ಲಿ ಮೊದಲು ಕಂಡುಬರುವ ದೂರು ಎಂದರೆ ಕಣ್ಣಿನ ದಣಿವು. ಸತತವಾಗಿ ಕಂಪ್ಯೂಟರ್ ಬಳಸುವ 50 ರಿಂದ 90% ಜನರಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸಂಭವಿಸುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ.

ಈ ಸಮಸ್ಯೆಗಳು ದೈಹಿಕ ಆಯಾಸ, ಕಡಿಮೆ ಉತ್ಪಾದನೆ ಮತ್ತು ಹೆಚ್ಚಿನ ಸಂಖ್ಯೆಯ ಕೆಲಸದ ದೋಷಗಳನ್ನು ಉಂಟುಮಾಡುವುದರೊಂದಿಗೆ ಕಣ್ಣು ಕೆಂಪಾಗುವುದರಂತಹ ಸಣ್ಣ ಸಣ್ಣ ಕಿರಿಕಿರಿಗಳನ್ನೂ ಉಂಟುಮಾಡುತ್ತದೆ. ಆದ್ದರಿಂದ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.
 
*ಕಂಪ್ಯೂಟರ್ ಇರುವ ಸ್ಥಳದಲ್ಲಿ ಚೆನ್ನಾಗಿ ಬೆಳಕಿರಲಿ: ನೀವು ಕಂಪ್ಯೂಟರ್ ಬಳಸುವಾಗ ಆ ಸ್ಥಳದಲ್ಲಿ ಚೆನ್ನಾಗಿ ಬೆಳಕಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಬೆಳಕು ಹಿನ್ನೆಲೆಯ ಬೆಳಕಿಗಿಂತ ಕಡಿಮೆಯಿರಬೇಕು. ಕಂಪ್ಯೂಟರ್‌ ಬಳಸುವಾಗ ಅದರಿಂದ ಆದಷ್ಟು ದೂರ ಕುಳಿತುಕೊಳ್ಳಿ. ನಿರಂತರವಾಗಿ ಕಂಪ್ಯೂಟರ್ ಸ್ಕ್ರೀನ್ ನೋಡುವಿಕೆಯು ನಿಮ್ಮ ಕಣ್ಣುಗಳಿಗೆ ಶ್ರಮವನ್ನುಂಟುಮಾಡುತ್ತದೆ.
 
*20-20-20 ನಿಯಮವನ್ನು ಪಾಲಿಸಿ: ಕಂಪ್ಯೂಟರ್ ಪರದೆಯನ್ನು ನಿರಂತರವಾಗಿ ನೋಡುತ್ತಿರಬೇಡಿ. 20-20-20 ನಿಯಮವನ್ನು ಪಾಲಿಸಿ. ಪ್ರತಿ 20 ನಿಮಿಷಗಳಿಗೆ ವಿರಾಮವನ್ನು ತೆಗೆದುಕೊಳ್ಳಿ ಮತ್ತು ಕನಿಷ್ಟ 20 ಅಡಿ ದೂರವಿರುವ ವಸ್ತುವೊಂದನ್ನು 20 ಸೆಕೆಂಡುಗಳ ಕಾಲ ವೀಕ್ಷಿಸಿ. ಇದು ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಗಮನಹರಿಸುವಲ್ಲಿ ಕಣ್ಣಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
 
*ಕಣ್ಣನ್ನು ಮಿಟುಕಿಸುತ್ತಿರಿ: ನೀವು ಕೆಲಸವನ್ನು ಮಾಡುತ್ತಿರುವಾಗ ಕಣ್ಣು ಮಿಟುಕಿಸಲು ಮರೆತುಬಿಡುವುದು ಸಹಜವಾಗಿದೆ. ಹಾಗೆ ಮರೆತಾಗ ನಿಮ್ಮ ಕಣ್ಣುಗಳನ್ನು ನಯವಾಗಿರಿಸುವ ಕಣ್ಣುಗಳ ಮೇಲ್ಮೈಯಲ್ಲಿರುವ ತೇವಾಂಶ ಆವಿಯಾಗುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ಒಣಗಿಸುತ್ತದೆ. ಇದು ಒಣ ಕಣ್ಣಿನ ಸಿಂಡ್ರೋಮ್‌ಗೆ ಕಾರಣವಾಗುತ್ತದೆ. ಆದ್ದರಿಂದ ಆಗಾಗ ಕಣ್ಣು ಮಿಟುಕಿಸುತ್ತಿರಲು ಮರೆಯಬೇಡಿ.
 
*ಕಂಪ್ಯೂಟರ್ ಗ್ಲಾಸ್ ಬಳಸಿ: ಕಣ್ಣಿನ ಆರೈಕೆಯ ವೃತ್ತಿಪರರು ಕಸ್ಟಮೈಸ್ ಮಾಡಿದ ಕಂಪ್ಯೂಟರ್ ಗ್ಲಾಸ್ ಬಳಸಿ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಅದನ್ನು ಧರಿಸಿಕೊಳ್ಳಿ. ನೀವು ಕನ್ನಡಕ ಅಥವಾ ಕಾಂಟೆಕ್ಟ್ ಲೆನ್ಸ್ ಅನ್ನು ಬಳಸುತ್ತಿರುವವರಾದರೆ ವಿಶೇಷವಾಗಿ ಮರೆಯದೇ ಇದನ್ನು ಪಾಲಿಸಬೇಕು.
 
*ಆಗಾಗ ವಿರಾಮವನ್ನು ತೆಗೆದುಕೊಳ್ಳಿ: ಸಂಶೋಧನೆಯೊಂದರ ಪ್ರಕಾರ ಕೆಲಸಗಾರರು ದಿನಕ್ಕೆ 15 ನಿಮಿಷಗಳ ವಿರಾಮವನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಅದು ಸಾಲುವುದಿಲ್ಲ ಆದ್ದರಿಂದ ಆಗಾಗ 5-10 ನಿಮಿಷಗಳ ವಿರಾಮವನ್ನು ತೆಗೆದುಕೊಂಡು ನಿಮ್ಮ ಕತ್ತು, ಕೈ, ಕಾಲು ಭುಜಗಳನ್ನು ಸ್ಟ್ರೆಚ್ ಮಾಡಿದರೆ ಒತ್ತಡ ಕಡಿಮೆ ಆಗುತ್ತದೆ.
 
*ನಿಮ್ಮ ಕಂಪ್ಯೂಟರ್‌ನ ಡಿಸ್ಪ್ಲೇ ಅನ್ನು ಬದಲಾಯಿಸಿ: ನೀವು ಹಳೆಯ ಮಾದರಿಯ ಕಂಪ್ಯೂಟರ್ ಅನ್ನು ಬಳಸುತ್ತಿದ್ದರೆ ಆ ಮಾನಿಟರ್‌ನಲ್ಲಿ CRT ಮಾದರಿಯನ್ನು ಬಳಸಲಾಗುತ್ತದೆ. ಅದು ನಿಮ್ಮ ಕಣ್ಣುಗಳಿಗೆ ಹಾನಿಕಾರಕವಾಗಿದ್ದು ಮಾನಿಟರ್ ಅನ್ನು LCD ಗೆ ಬದಲಾಯಿಸಿಕೊಳ್ಳಿ. ಅದು ಪ್ರತಿಫಲನ ವಿರೋಧಿ ಮೇಲ್ಮೈ ಅನ್ನು ಹೊಂದಿದ್ದು ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿದೆ.
 
ಈ ಉಪಯುಕ್ತ ಸಲಹೆಗಳನ್ನು ಅನುಸರಿಸಿ ಕಂಪ್ಯೂಟರ್ ಬಳಕೆಯಿಂದಾಗಿ ಬರುವ ಕಣ್ಣುಗಳ ಸಮಸ್ಯೆಗಳಿಂದ ದೂರವಿರಿ.

ಅಂಡಾಣು ಬಿಡುಗಡೆಯಾಗಿದೆ ಎಂದು ಹೇಗೆ ತಿಳಿಯುವುದು ಗೊತ್ತಾ...?

ಹುಡುಗಿಯರ ಅಂದಕ್ಕಿಂತ ಹೆಚ್ಚು ಇವುಗಳನ್ನು ನೋಡಿ ಹುಡುಗರು ಮರುಳಾಗುತ್ತಾರೆ

ಮಕ್ಕಳನ್ನು ಕಾಡುವ ಜಂತುಹುಳುವಿನ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಶೋಭಾ ಕರಂದ್ಲಾಜೆ ವಿರುದ್ಧ 'ಗೋ ಬ್ಯಾಕ್ ‘ ಅಭಿಯಾನ ಆರಂಭಿಸಿದ ಪಕ್ಷದ ಕಾರ್ಯಕರ್ತರು. ಕಾರಣವೇನು ಗೊತ್ತಾ?

ಯುದ್ಧ ಮಾಡೋಣ ಎಂದ ಕ್ರಿಕೆಟಿಗ ಗೌತಮ್ ಗಂಭೀರ್ ಗೆ ಶಾಹಿದ್ ಅಫ್ರಿದಿ ಪ್ರತಿಕ್ರಿಯೆ ಏನು ಗೊತ್ತಾ?

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ