Select Your Language

Notifications

webdunia
webdunia
webdunia
webdunia

ಅತ್ಯಾಚಾರ ಸಂತ್ರಸ್ತೆಯರ ಫೋಟೋ ಬಳಸದಂತೆ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ಆದೇಶ

ಅತ್ಯಾಚಾರ ಸಂತ್ರಸ್ತೆಯರ ಫೋಟೋ ಬಳಸದಂತೆ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ಆದೇಶ
ನವದೆಹಲಿ , ಗುರುವಾರ, 2 ಆಗಸ್ಟ್ 2018 (13:01 IST)
ನವದೆಹಲಿ : ರೇಪ್ ಕೇಸ್ ಸುದ್ದಿ ಪ್ರಕಟಣೆಯ ಕುರಿತಾಗಿ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ಇಂದು( ಗುರುವಾರ) ಮಹತ್ವದ ಆದೇಶವೊಂದನ್ನು ನೀಡಿದೆ.


ಇನ್ನು ಮುಂದೆ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಸಂತ್ರಸ್ತೆಯರ ಎಡಿಟೆಡ್ ಚಿತ್ರವನ್ನೂ, ವಿಡಿಯೋವನ್ನೂ ಮಾಧ್ಯಮಗಳು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದ ಕತುವಾ ಅತ್ಯಾಚಾರ ಪ್ರಕರಣದ ನಂತರ ಅಪ್ರಾಪ್ತ ಬಾಲಕಿಯ ಚಿತ್ರವನ್ನು ಮಾಧ್ಯಮಗಳು ಬಳಸಿದ್ದನ್ನು ಸುಪ್ರೀಂ ಕೋರ್ಟ್ ವಿರೋಧಿಸಿತ್ತು, ಹಾಗೇ ಸಂತ್ರಸ್ಥೆಯ ಚಿತ್ರ ಬಳಸಿದ ಮಾಧ್ಯಮಗಳಿಗೆ ದಂಡ  ಕೂಡ ವಿಧಿಸಿತ್ತು.
ಈ ಬಗ್ಗೆ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ , ಇದೀಗ ಈ ಅರ್ಜಿಯ ವಿಚಾರಣೆ ನಡೆಸಿ ಮಾಧ್ಯಮಗಳು ಈ ವಿಷಯದಲ್ಲಿ ಕಡಿವಾಣ ಹಾಕಿಕೊಳ್ಳಬೇಕು ಎಂದು ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಐಎಡಿಎಂಕೆ ಶಾಸಕ ಬೋಸ್ ಇನ್ನಿಲ್ಲ