Select Your Language

Notifications

webdunia
webdunia
webdunia
webdunia

ಜೈವಿಕ ಇಂಧನ ಮೈತ್ರಿಕೂಟಕ್ಕೆ ನರೇಂದ್ರ ಮೋದಿ ಚಾಲನೆ

ಜೈವಿಕ ಇಂಧನ ಮೈತ್ರಿಕೂಟಕ್ಕೆ ನರೇಂದ್ರ ಮೋದಿ ಚಾಲನೆ
ನವದೆಹಲಿ , ಭಾನುವಾರ, 10 ಸೆಪ್ಟಂಬರ್ 2023 (09:41 IST)
ನವದೆಹಲಿ : ಜಾಗತಿಕ ಜೈವಿಕ ಇಂಧನ ಮೈತ್ರಿಕೂಟವನ್ನು ಭಾರತ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಘೋಷಿಸಿದ್ದಾರೆ. ಜಿ20 ರಾಷ್ಟ್ರಗಳು ಈ ಮೈತ್ರಿಗೆ ಸೇರುವಂತೆ ವಿಶ್ವದ ನಾಯಕರಿಗೆ ಆಹ್ವಾನ ನೀಡಿದ್ದಾರೆ.

ಜಿ20 ಶೃಂಗಸಭೆಯ ಅಧಿವೇಶನದಲ್ಲಿ ‘ಒಂದು ಭೂಮಿ’ ವಿಷಯದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕವಾಗಿ ಪೆಟ್ರೋಲ್ನಲ್ಲಿ ಎಥನಾಲ್ ಮಿಶ್ರಣವನ್ನು 20%ಕ್ಕೆ ತರುವ ತಮ್ಮ ಮನವಿಯೊಂದಿಗೆ ಮೈತ್ರಿಕೂಟಕ್ಕೆ ಸೇರಲು ಜಿ20 ರಾಷ್ಟ್ರಗಳನ್ನು ಕೇಳಿಕೊಂಡಿದ್ದಾರೆ.

ಇಂದು ಇಂಧನ ಮಿಶ್ರಣ ಕ್ಷೇತ್ರದಲ್ಲಿ ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ನಲ್ಲಿ ಎಥನಾಲ್ ಮಿಶ್ರಣವನ್ನು 20% ವರೆಗೆ ತರುವುದು ನಮ್ಮ ಪ್ರಸ್ತಾಪವಾಗಿದೆ. ಅಥವಾ ಪರ್ಯಾಯವಾಗಿ, ಜಾಗತಿಕ ಒಳಿತಿಗಾಗಿ ನಾವು ಮತ್ತೊಂದು ಮಿಶ್ರಣವನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಬಹುದು. ಇದು ಸ್ಥಿರವಾದ ಇಂಧನ ಪೂರೈಕೆಯನ್ನು ಖಾತ್ರಿಪಡಿಸುತ್ತದೆ ಮತ್ತು ಹವಾಮಾನ ಭದ್ರತೆಗೆ ಕೊಡುಗೆ ನೀಡುತ್ತದೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಆರ್ಥಿಕತೆಗೆ ಜಿ20 ಶೃಂಗಸಭೆಯಲ್ಲಿ ಬಿಗ್ ಡೀಲ್