Select Your Language

Notifications

webdunia
webdunia
webdunia
webdunia

ಮನ್ ಕಿ ಬಾತ್ ನಲ್ಲಿ ಕ್ರೀಡೆ ಮತ್ತು ಯೋಗಾಸನದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

ಮನ್ ಕಿ ಬಾತ್ ನಲ್ಲಿ ಕ್ರೀಡೆ ಮತ್ತು ಯೋಗಾಸನದ ಬಗ್ಗೆ  ಪ್ರಧಾನಿ ಮೋದಿ  ಹೇಳಿದ್ದೇನು ಗೊತ್ತಾ?
ನವದೆಹಲಿ , ಭಾನುವಾರ, 24 ಜೂನ್ 2018 (15:41 IST)
ನವದೆಹಲಿ : ಅಪಾರ ಜನಪ್ರಿಯತೆ ಪಡೆದಿರುವ ಮನ್ ಕಿ ಬಾತ್ (ಮನದ ಮಾತು) ಬಾನುಲಿ ಕಾರ್ಯಕ್ರಮದ 45ನೆ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಕ್ರೀಡೆ ಮತ್ತು ಯೋಗಾಸನದ ಪ್ರಾಮುಖ್ಯತೆ ಬಗ್ಗೆ ತಿಳಿಸಿದ್ದಾರೆ.


ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರತ ಮತ್ತು ಆಫ್ಘಾನಿಸ್ಥಾನದ ನಡುವೆ ನಡೆದ ಕ್ರಿಕೆಟ್ ಟೆಸ್ಟ್ ಪಂದ್ಯ ಎರಡೂ ದೇಶಗಳ ಬಾಂಧವ್ಯ ಬೆಸುಗೆಯಲ್ಲಿ ನೆರವಾಗಿದೆ. ಇಂತಹ ಕ್ರೀಡೆಗಳಿಂದ ದೇಶಗಳು ಮತ್ತು ಜನರ ನಡುವೆ ಪರಸ್ಪರ ಬೆಸುಗೆ ವೃದ್ಧಿಯಾಗುತ್ತದೆ. ಹಾಗೇ ಯೋಗಾಸನ ಸಹ ವಿಶ್ವವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈಗ ಯೋಗವು ವೆಲ್‍ನೆಸ್ (ಸೌಖ್ಯ) ಅಭಿಯಾನವಾಗಿ ಲೋಕಪ್ರಿಯವಾಗುತ್ತಿದೆ ಎಂದು ಮೋದಿ ಅವರು ಹೇಳಿದ್ದಾರೆ.


ಹಾಗೇ ಜುಲೈ 1ರಂದು ಅಂತಾರಾಷ್ಟ್ರೀಯ ವೈದ್ಯರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಹತ್ಯೆ ಆರೋಪಿ ಪರಶುರಾಮ್ ಬಳಿ ಕೃತ್ಯದ ಮರುಸೃಷ್ಟಿ ಮಾಡಿಸಿ ಎಸ್ಐಟಿ