Select Your Language

Notifications

webdunia
webdunia
webdunia
webdunia

ಪುಣ್ಯಕ್ಷೇತ್ರಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಬಾಂಬ್ ದಾಳಿ ಬೆದರಿಕೆ; ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್

ಪುಣ್ಯಕ್ಷೇತ್ರಗಳು ಹಾಗೂ  ರೈಲು ನಿಲ್ದಾಣಗಳಲ್ಲಿ ಬಾಂಬ್ ದಾಳಿ ಬೆದರಿಕೆ; ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್
ಉತ್ತರ ಪ್ರದೇಶ , ಗುರುವಾರ, 7 ಜೂನ್ 2018 (13:59 IST)
ಉತ್ತರ ಪ್ರದೇಶ : ಉತ್ತರ ಪ್ರದೇಶದ ಪುಣ್ಯಕ್ಷೇತ್ರಗಳು ಹಾಗೂ  ರೈಲು ನಿಲ್ದಾಣಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಪತ್ರ ಬಂದಿರುವ ಹಿನ್ನಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.


ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇಗುಲ ಮತ್ತು ಮಥುರಾದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಾನ ಮೇಲೆ ಹಾಗೂ ಸಹರಾನ್ಪುರ ಮತ್ತು ಹಾಪುರ್‌ ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಉಗ್ರ ಸಂಘಟನೆ ಲಷ್ಕರ್‌-ಎ-ತೊಯ್ಬಾ ಸಂಘಟನೆ ಬೆದರಿಕೆಯೊಡ್ಡಿದೆ. ಲಷ್ಕರೆ ಏರಿಯಾ ಕಮಾಂಡರ್ ಮೌಲಾನಾ ಅಂಬು ಶೇಖ್ ಮೇ 29 ರಂದು ದೆಹಲಿಯ ಉತ್ತರ ರೈಲ್ವೆ ವಿಭಾಗದ ವ್ಯವಸ್ಥಾಪಕರಿಗೆ ಈ ಕುರಿತಾಗಿ ಪತ್ರ ಬರೆದಿದ್ದಾನೆ. ಜೂ.8-10ರ ಒಳಗಾಗಿ ದೇಗುಲಕ್ಕೆ ಬಾಂಬ್‌ ಹಾಕುವುದಾಗಿ ಪತ್ರದಲ್ಲಿ ತಿಳಿಸಿದ ಕಾರಣ ಉತ್ತರ ಪ್ರದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಲಿಕಾಪ್ಟರ್ ಹಣ ಕಟ್ಟಿಸಿಕೊಳ್ಳುೆವಷ್ಟು ದರಿದ್ರ ಬಂದಿಲ್ಲ: ಸಿಎಂ ಎಚ್ ಡಿಕೆ