Select Your Language

Notifications

webdunia
webdunia
webdunia
webdunia

ಸಿಹಿ ಕಹಿ ಚಂದ್ರು ಔಟ್! ಬಿಗ್ ಬಾಸ್ ಮನೆಯೊಳಗೆ ಶುರುವಾಗಿದೆ ಅರಿಯದ ನಡುಕ!

ಸಿಹಿ ಕಹಿ ಚಂದ್ರು ಔಟ್! ಬಿಗ್ ಬಾಸ್ ಮನೆಯೊಳಗೆ ಶುರುವಾಗಿದೆ ಅರಿಯದ ನಡುಕ!
ಬೆಂಗಳೂರು , ಸೋಮವಾರ, 4 ಡಿಸೆಂಬರ್ 2017 (10:32 IST)
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಹಿರಿಯ ನಟ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿರುವುದು ಸ್ಪರ್ಧಿಗಳಲ್ಲಿ ಒಂಥರಾ ಆತಂಕ ಮನೆ ಮಾಡಿದೆ.
 

ಸಿಹಿ ಕಹಿ ಚಂದ್ರುವಿನಂತಹ ಹಿರಿಯ ನಟ, ಜನಪ್ರಿಯ ನಟ ಹೊರ ಹೋಗಿರುವುದು ಸ್ಪರ್ಧಿಗಳಿಗೆ ತಮ್ಮ ಅಸ್ಥಿತ್ವದ ಬಗ್ಗೆ ನಡುಕ ಶುರುವಾಗಿದೆ. ‘ಅಪ್ಪ’ನಿಲ್ಲದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ದಿವಾಕರ್, ಚಂದನ್, ಸಮೀರ್ ಆಚಾರ್ಯರಿಂದ ಹಿಡಿದು, ಸಿಹಿ ಕಹಿ ಚಂದ್ರು ಅವರಿಗೆ ಆಪ್ತರಾಗಿದ್ದ ಅನುಪಮಾ ಗೌಡ, ಜಗನ್ ಸಿಹಿ ಕಹಿ ಚಂದ್ರು ಹೊರ ಹೋಗಿದ್ದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಅವರೇ ಹೋಗುತ್ತಾರೆಂದರೆ ಇನ್ನು ನಮ್ಮ ಕತೆ ಏನು ಎಂದು ದಿವಾಕರ್ ಎಂದರೆ, ಅವರ ಮುಂದೆ ನಾವೆಲ್ಲಾ ಏನೂ ಅಲ್ಲ ಎಂದು ಆತಂಕದಿಂದಲೇ ಮಾತಾಡಿಕೊಂಡರು. ಅಂತೂ ಬಿಗ್ ಬಾಸ್ ಮನೆಯಲ್ಲಿ ಬಿಗ್ ವಿಕೆಟ್ ಬಿದ್ದಿರುವುದು ದೊಡ್ಡ ಶಾಕ್ ಉಂಟು ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯೊಳಗೇ ಅನುಪಮಾ-ಜೆಕೆ ಕರಾಳ ರಾತ್ರಿ!