Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾಗೆ ಹಾರಲಿರುವ ‘ರಾಧಾ ರಮಣ’ ಧಾರವಾಹಿ ಜೋಡಿ!

ಆಸ್ಟ್ರೇಲಿಯಾಗೆ ಹಾರಲಿರುವ ‘ರಾಧಾ ರಮಣ’ ಧಾರವಾಹಿ ಜೋಡಿ!
Bangalore , ಸೋಮವಾರ, 12 ಜೂನ್ 2017 (10:08 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಜನಪ್ರಿಯವಾಗಿರುವ ಧಾರವಾಹಿ ರಾಧಾ ರಮಣ. ಕನ್ನಡ ಟೀಚರ್ ರಾಧಾ ಮಿಸ್ ಹಾಗೂ ಕಾಂಟ್ರಾಕ್ಟ್ ಗಂಡ ರಮಣ ಇದೀಗ ಆಸ್ಟ್ರೇಲಿಯಾಗೆ ಹಾರಲಿದ್ದಾರೆ!

 
ಹೌದು. ಸಿನಿಮಾದವರಂತೆ ಧಾರವಾಹಿ ತಂಡಗಳೂ ವಿದೇಶಕ್ಕೆ ಹಾರಿ ಅಲ್ಲಿ ಚಿತ್ರೀಕರಣ ನಡೆಸುವುದು ಇದೇ ಹೊಸದೇನಲ್ಲ. ಈ ಮೊದಲು ಹಲವು ಧಾರವಾಹಿಗಳೂ ವಿದೇಶದಲ್ಲಿ ಚಿತ್ರೀಕರಣ ನಡೆಸಿದ್ದವು. ಅವರ ಸಾಲಿಗೆ ರಾಧಾ ರಮಣ ಧಾರವಾಹಿ ಸೇರಿಕೊಳ್ಳಲಿದೆ.

ಧಾರವಾಹಿಯ ಕತೆಯ ಪ್ರಕಾರ ಮುಖ್ಯ ಪಾತ್ರಧಾರಿ ರಮಣ್ ತನ್ನ ಬ್ಯುಸಿನೆಸ್ ವಿಸ್ತರಿಸುವ ಉದ್ದೇಶಕ್ಕೆ ಆಸ್ಟ್ರೇಲಿಯಾಕ್ಕೆ ಹಾರುತ್ತಾನೆ. ಆತನ ಜತೆಗೆ ಪತ್ನಿ ರಾಧಾ ಕೂಡಾ ಜತೆಯಾಗುವಂತೆ ಕತೆ ಹೆಣೆಯಲಾಗಿದೆ. ದೃಶ್ಯದ ಅಗತ್ಯಕ್ಕೆ ತಕ್ಕಂತೆ ವಿದೇಶದಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ ಎಂದು ಧಾರವಾಹಿ ತಂಡ ಮಾಧ್ಯಮವೊಂದಕ್ಕೆ ಹೇಳಿಕೊಂಡಿದೆ.

ಅದೇನೇ ಇದ್ದರೂ, ಈ ನೆಪದಲ್ಲಿ ಧಾರವಾಹಿಗೊಂದಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನವಷ್ಟೇ. ಅದೇನೇ ಇದ್ದರೂ, ಕಾಂಗಾರೂಗಳ ನಾಡಿನಲ್ಲಿ ಹಿಂದೊಮ್ಮೆ ಇದೇ ವಾಹಿನಿಯ ಅಶ್ವಿನಿ ನಕ್ಷತ್ರ ತಂಡ ಹೋಗಿ ಬಂದಿತ್ತು. ಇದೀಗ ರಾಧಾ ರಮಣ ಸರದಿ. ಸುಂದರ ತಾಣದಲ್ಲಿ ಈ ಲೈವ್ಲೀ ಪೇರ್ ಅದೇನು ಮೋಡಿ ಮಾಡುತ್ತಾರೆ ನೋಡಬೇಕು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೂಸ್ ಮಾದ ಯೋಗಿ ಎಂಗೇಜ್ಡ್!