Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಈಗ ನಾಯಕನಿಲ್ಲದ ಸಾಮ್ರಾಜ್ಯ!

ಬಿಗ್ ಬಾಸ್ ಈಗ ನಾಯಕನಿಲ್ಲದ ಸಾಮ್ರಾಜ್ಯ!
ಬೆಂಗಳೂರು , ಮಂಗಳವಾರ, 19 ಡಿಸೆಂಬರ್ 2017 (10:10 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ನಾಯಕನೇ ಇಲ್ಲ.   ಈ ವಾರ ಬಿಗ್ ಬಾಸ್ ಹೊಸ ನಿಯಮ ನೀಡಿದ್ದು ನಾಯಕನ ಆಯ್ಕೆ ಪ್ರಕ್ರಿಯೆ ನಡೆಸಿಲ್ಲ.
 

ಪ್ರತೀ ಸೋಮವಾರ ನಾಯಕನ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಆದರೆ ಈ ಬಾರಿ ನಾಯಕನಿರುವುದಿಲ್ಲ. ಬದಲಾಗಿ ಮನೆಯವರೆಲ್ಲರೂ ಜವಾಬ್ದಾರಿಯಿಂದ ಕೆಲಸ ಹಂಚಿಕೊಂಡು ಮಾಡಿಕೊಳ್ಳಲು ಬಿಗ್ ಬಾಸ್ ಸೂಚಿಸಿದ್ದಾರೆ.

ಆದರೆ ನಾಮಿನೇಷನ್ ಪ್ರಕ್ರಿಯೆ ಎಂದಿನಂತೆ ನಡೆದಿದೆ. ಅದರಲ್ಲೂ ಈ ಬಾರಿ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದು, ಪುರುಷರು ಮಹಿಳಾ ಸದಸ್ಯರನ್ನು, ಮಹಿಳಾ ಸದಸ್ಯರು ಪುರುಷ ಸದಸ್ಯರನ್ನು ನಾಮಿನೇಟ್ ಮಾಡಲು ಸೂಚಿಸಲಾಗಿತ್ತು.

ಅದರಂತೆ ಈ ವಾರ ನಾಮಿನೇಟ್ ಆದವರು ಸಮೀರ್, ನಿವೇದಿತಾ, ಜಯಶ್ರೀನಿವಾಸನ್, ಸಂಯುಕ್ತಾ, ಅನುಪಮಾ ಮತ್ತು ದಿವಾಕರ್  ಅವರನ್ನು ಮನೆಯವರು ನಾಮಿನೇಟ್ ಮಾಡಿದ್ದಾರೆ. ಅದಲ್ಲದೆ, ಸೂಪರ್ ಪವರ್ ಅಧಿಕಾರ ಬಳಸಿದ ಜೆಕೆ ಲಾಸ್ಯ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿಯನ್ನು ನೆನಪಿಸುತ್ತಿದೆ ಕುಮಾರಸ್ವಾಮಿ ಪುತ್ರನ ಕುರುಕ್ಷೇತ್ರ ಟೀಸರ್! (ವಿಡಿಯೋ)