Select Your Language

Notifications

webdunia
webdunia
webdunia
webdunia

Drone Pratap: ಮಾತು ತಪ್ಪದ ಡ್ರೋಣ್ ಪ್ರತಾಪ್: ಬಿಗ್ ಬಾಸ್ ನಲ್ಲಿ ಗೆದ್ದ ಬೈಕ್ ದಾನ

Drone Pratap

Krishnaveni K

ಬೆಂಗಳೂರು , ಬುಧವಾರ, 21 ಫೆಬ್ರವರಿ 2024 (10:05 IST)
Photo Courtesy: Instagram
ಬೆಂಗಳೂರು: ಬಿಗ್ ಬಾಸ್ ಕನ್ನಡ ಸಿಸನ್ 10 ರ ರನ್ನರ್ ಅಪ್ ಆಗಿದ್ದ ಡ್ರೋಣ್ ಪ್ರತಾಪ್ ಕೊಟ್ಟ ಮಾತಿನಂತೆ ನಡೆದುಕೊಂಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 ಬಿಗ್ ಬಾಸ್ ಕನ್ನಡ ಸೀಸನ್ 10 ರ ಫೈನಲ್ ವೇದಿಕೆಯಲ್ಲಿ ಪ್ರತಾಪ್ ತಮಗೆ ಉಡುಗೊರೆಯಾಗಿ ಸಿಕ್ಕ ಬೈಕ್, ಹಣವನ್ನು ಅಗತ್ಯವಿರುವವರಿಗೆ ದಾನ ಮಾಡುವುದಾಗಿ ತಿಳಿಸಿದ್ದರು. ಪ್ರತಾಪ್ ಗೆ ಒಂದು ಎಲೆಕ್ಟ್ರಿಕಲ್ ಸ್ಕೂಟಿ ಮತ್ತು 10 ಲಕ್ಷ ರೂ. ಹಣವನ್ನು ಬಹುಮಾನವಾಗಿ ನೀಡಲಾಗಿತ್ತು.

ಆ ಪೈಕಿ ಬೈಕ್ ನ್ನು ಈಗ ಅಗತ್ಯವಿದ್ದ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಈ ವಿಚಾರವನ್ನು ಅವರೇ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಯುವಕನಿಗೆ ಬೈಕ್ ನೀಡುತ್ತಿರುವ ಫೋಟೋ ಪ್ರಕಟಿಸಿದ ಡ್ರೋಣ್ ಪ್ರತಾಪ್ ‘ ಬಿಗ್ ಬಾಸ್ ನಲ್ಲಿ ಬಹುಮಾನವಾಗಿ ಬಂದ ಬೈಕ್ ನ್ನು ಯಾರಿಗೆ ನೀಡಿದೆ ಎಂಬುದಕ್ಕೆ ಇಲ್ಲಿದೆ ಉತ್ತರ. ಇವರು ರಾಜು ಅಂತ ಮಧ‍್ಯಾಹ್ನದಿಂದ ಸಂಜೆವರೆಗೆ ಹೋಟೆಲ್ ನಲ್ಲಿ ಕೆಲಸ ಮಾಡಿ, ಸಂಜೆಯ ಮೇಲೆ ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ. ಇವರು ತಮ್ಮ ಸ್ನೇಹಿತರ ಹೆಸರಿನಲ್ಲಿ ಬೈಕ್ ತೆಗೆದುಕೊಂಡರು ಮತ್ತು ಆರು ತಿಂಗಳು ಕಂತು ಕಟ್ಟಿದರು.ಆದರೆ ಅವರ ಸ್ನೇಹಿತ ಮಾಡಿದ
ಮೋಸದಿಂದ ಬೈಕ್ ಸೀಝ್ ಮಾಡಿದರು. ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕಲ್ ಗಾಡಿಯನ್ನು ನೀಡಿದ್ದು ತುಂಬಾ ಖುಷಿ ತಂದಿದೆ’ ಎಂದು ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ಹೋದ ಮೇಲೆ ಡ್ರೋಣ್ ಪ್ರತಾಪ್ ಇಮೇಜ್ ಬದಲಾಗಿತ್ತು. ವಂಚಕ ಎಂದುಕೊಂಡಿದ್ದ ಪ್ರತಾಪ್ ಹೊರಗೆ ಬಂದ ಮೇಲೆ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡರು. ಅವರು ಈ ಘೋಷಣೆ ಮಾಡಿದ್ದಾಗ ಎಲ್ಲರೂ ಇದನ್ನು  ನಿಜ ಮಾಡುತ್ತಾರಾ ಎಂದು ಸಂಶಯಪಟ್ಟಿದ್ದರು. ಆದರೆ ಈಗ ಹೇಳಿದಂತೆ ನಡೆದುಕೊಂಡು ಎಲ್ಲರ ಮನ ಗೆದ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಕ ವಿಜಯ್ ಪ್ರಕಾಶ್ ಬರ್ತ್ ಡೇ: ಈ ದೇಶದಲ್ಲಿದೆ ವಿಪಿ ಸರ್ ಗೊಂದು ದಿನ!